Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಅವಧೂತ ಮಹಿಮೆ / Avadhūta Mahime

ಅವಧೂತ ಮಹಿಮೆ 8 Avadhuta Mahime 8

Published

on

ಕನ್ನಡ1 of 2
To Change Language, Click ← → (arrow) Button

ಶ್ರೀ ಕ್ಷೇತ್ರ ಬೆಲಗೂರಿನ ಶ್ರೀ ಮಹಾಲಕ್ಷ್ಮಿ ಪಾದುಕೆಯ ದಿವ್ಯ ದರ್ಶನ.

 

ಶ್ರೀ ಕ್ಷೇತ್ರ ಬೆಲಗೂರಿನ ಶ್ರೀ ಮಹಾಲಕ್ಷ್ಮಿ ಪಾದುಕೆಯ ವಿಶೇಷ 2

ಶ್ರೀನಿವಾಸ ರೆಡ್ಡಿಯವರು ಎಲೆಕ್ಟ್ರಾನಿಕ್ ಬಿಡಿ ಭಾಗಗಳ ತಯಾರಿಕ ಉತ್ಪಾದನಾ ಘಟಕವನ್ನು ಹೊಂದಿದ್ದರು. ಒಮ್ಮೆ ಅನಿರೀಕ್ಷಿತ ಹೊಡೆತಗಳಿಂದ ಉದ್ಯಮವು ಕ್ರಮೇಣ ನಷ್ಟದಲ್ಲಿ ಸಿಲುಕಿಕೊಂಡಿತು.ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿದ್ದ ಶ್ರೀನಿವಾಸ ರೆಡ್ಡಿಯವರಿಗೆ ಬೆಲಗೂರಿನ ಅವಧೂತರ ಬಳಿ ಹೋಗುವಂತೆ ಪರಿಚಿತರೊಬ್ಬರು ಸೂಚಿಸಿದರು.
ಶ್ರೀಕ್ಷೇತ್ರಕ್ಕೆ ಬಂದು ಶ್ರೀವೀರಾಂಜನೇಯ ಸ್ವಾಮಿಗೆ ವಂದಿಸುತ್ತಿರುವಾಗ ಶ್ರೀಬಿಂದುಮಾಧವ ಶರ್ಮರ ದರ್ಶನವು ಲಭಿಸಿತು.ರೆಡ್ಡಿಯವರು
ಅವರಿಗೆ ನಮಸ್ಕರಿಸಿದೊಡನೆಯೆ ಅವಧೂತರು ನೀನು ಈ ಆಂಜನೇಯನ ದೇವಾಲಯಕ್ಕೆ ಬಣ್ಣಮಾಡಿಸು ಎಂದು ಅಪ್ಪಣೆಯಿತ್ತರು.ರೆಡ್ಡಿಯವರ ಜೊತೆಗಿದ್ದವರಿಗೆ ಆಶ್ಚರ್ಯ ಜೊತೆಗೆ ಆತಂಕವಾಯಿತು.ಗುರುಗಳು ನುಡಿದ ಕ್ಷಣದಲ್ಲಿ ರೆಡ್ಡಿಯವರ ಬಳಿ 5000 ರೂಪಾಯಿ ಕೂಡ ಇರಲಿಲ್ಲ. ಆದರೂ ಗುರುಗಳು ಹೇಳಿದಂತೆ ಮಾಡುವುದಾಗಿ ತಿಳಿಸಿ ಗುರುಗಳಿಗೆ ನಮಿಸಿ ರೆಡ್ಡಿಯವರು ಹೊರಟರು.

ಕ್ಷೇತ್ರದಿಂದ ಮರಳಿದ ಕೆಲವು ದಿನಗಳು ಉರುಳಿದ ಬಳಿಕ ಬಹಳ ನಷ್ಟವಾಗಿದ್ದ ತನ್ನ ಕಾರ್ಖಾನೆಯಲ್ಲಿ ರೆಡ್ಡಿಯವರು ಒಮ್ಮೆ ಕುಳಿತಿದ್ದಾಗ, ಸಂಚಾರದಲ್ಲಿದ್ದ ಕ್ಷೇತ್ರದ ಮಹಾಲಕ್ಷ್ಮಿ ಪಾದುಕೆ ಅಲ್ಲಿಗೆ ಅನಿರೀಕ್ಷಿತವಾಗಿ ಆಗಮಿಸಿತು. ಆದರೆ ರೆಡ್ಡಿಯವರಿಗೆ ನೀಡಲು 10 ರೂ ಕೂಡ ಇಲ್ಲ. ಆಗ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಲಕ್ಷ್ಮೀನಾರಾಯಣಭಟ್ಟರು(ರಘು) ರೆಡ್ಡಿಯವರಿಗೆ ತಮ್ಮ ಬಳಿ ಕರೆದು 500 ರೂಗಳನ್ನು ನೀಡಿ ಪೂಜಿಸಲು ಹೇಳಿ ಆ ಹಣವನ್ನು ಆತನ ಕಾರ್ಖಾನೆಯ ಹಣದ ಪೆಟ್ಟಿಗೆಯಲ್ಲಿ ಹಾಕಿದರು. ಹೀಗಾಗಿ ವಾರ ಕಳೆಯುವುದರೊಳಗೆ ರೆಡ್ಡಿಯವರಿಗೆ 1ಕೋಟಿಯ ವ್ಯವಹಾರ ಕುದುರಿತು. ಕ್ರಮೇಣವಾಗಿ ಆರ್ಥಿಕವಾಗಿ ಚೇತರಿಕೆ ಕಾಣಲಾರಂಭವಾಯಿತು. ಕೆಲವು ದಿನಗಳ ನಂತರ ಕ್ಷೇತ್ರಕ್ಕೆ ಬಂದು ಅವಧೂತರ ಆದೇಶಿಸಿದಂತೆ ದೇವಸ್ಥಾನಕ್ಕೆ ಬಣ್ಣಮಾಡಿಸಿದರು. ಅವಧೂತರ ಅನುಗ್ರಹ ಸದಾ ಸ್ಮರಿಸುತ್ತಾ ಇಂದಿಗೂ ಕ್ಷೇತ್ರದ ಸೇವೆಯಲ್ಲಿ ನಿರತರಾಗಿದ್ದಾರೆ.

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!