Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಅವಧೂತ ಮಹಿಮೆ / Avadhūta Mahime

ಶ್ರೀಪಾದ ಶ್ರೀವಲ್ಲಭ ಚರಿತ್ರೆ 2  Sri Pada Sri Vallabha Charitre 2

Published

on

ಕನ್ನಡ1 of 2
To Change Language, Click ← → (arrow) Button

 

ಶಂಕರಭಟ್ಟನೆಂಬ ಸ್ಮಾರ್ತ ಕನ್ನಡ ಬ್ರಾಹ್ಮಣನು ಉಡುಪಿಗೆ ಶ್ರೀಕೃಷ್ಣನ ದರ್ಶನಾರ್ಥಿಯಾಗಿ ಬರಲು ಶ್ರೀಕೃಷ್ಣನ ಅಪ್ಪಣೆಯ ಮೇರೆಗೆ ಕನ್ಯಾಕುಮಾರಿಗೆ ಭೇಟಿಯಿತ್ತನು. ಅಮ್ಮನವರು ಶ್ರೀಪಾದವಲ್ಲಭ ದರ್ಶನ ಪ್ರಾಪ್ತಿರಸ್ತು ಎಂದು ಆಶೀರ್ವದಿಸಿ ಕುರುವಪುರಕ್ಕೆ ತೆರಳಲು ಪ್ರೇರಣೆ ನೀಡಿದರು. ಅಲ್ಲಿಂದ ಹೊರಟು ಪಕ್ಕದಲ್ಲಿರುವ ಮರುದಮಲೈ ಎಂಬ ಗ್ರಾಮವನ್ನು ಕಂಡನು. ಆಂಜನೇಯ ದೇವರು ಸಂಜೀವಿನಿ ಪರ್ವತವನ್ನು ಹಿಮಾಲಯಕ್ಕೆ ವಾಪಸ್ಸು ಓಯ್ಯುತ್ತಿರುವಾಗ ದಾರಿಯಲ್ಲಿ ಒಂದು ತುಂಡು ಜಾರಿ ಕೆಳಕ್ಕೆ ಬಿದ್ದು ಬೆಟ್ಟವಾಗಿ ಮಾರ್ಪಟ್ಟಿತು ಅದನ್ನೇ ಮರುದಮಲೈ ಎಂದುಕರೆಯುವರು.

ಆ ಬೆಟ್ಟದಲ್ಲಿ ಕೆಲವು ಗುಹೆಗಳು ಇದ್ದವು. ಅವುಗಳಲ್ಲಿ ಕೆಲವು ಸಿದ್ಧಪುರುಷರು ಹಲವಾರು ವರ್ಷಗಳಿಂದ ಅದೃಷ್ಯರಾಗಿ ತಪಸ್ಸು ಆಚರಿಸುತ್ತಿದ್ದರು. ಶಂಕರಭಟ್ಟನು ಕುತೂಹಲದಿಂದ ಯಾರಾದರೂ ಸಿದ್ಧಪುರುಷರು ಲಭ್ಯವಿದ್ದರಯೇ ? ನನಗೆ ಕಾಣಬಹುದೇ ಯೋಚಿಸುತ್ತಾ ನಡೆದನು. ಒಂದು ಗುಹೆಯ ದ್ವಾರದಲ್ಲಿ ಒಂದು ದೊಡ್ಡ ಹುಲಿಯ ರೂಪದ ಸಿದ್ಧಪುರುಷರು ನಿಂತಿದ್ದರು. ಹೆದರಿಕೆಯಿಂದ ಭಟ್ಟರು ಶ್ರೀಪಾದವಲ್ಲಭ ಎಂದು ಧ್ಯಾನ ಮಾಡುತ್ತಾ ಮುಂದೆ ಸಾಗಲು ಆ ಹುಲಿ ಸಾಧುಪ್ರಾಣಿಯಂತೆ ನಿಂತಿತ್ತು. ಆ ಗುಹೆಯ ಒಳಗಿನಿಂದ ಒಬ್ಬ ವೃದ್ಧ ತಪಸ್ವಿ ಹೊರಬಂದರು.
ಆ ವೃದ್ಧ ತಪಸ್ವಿಯು ಭಟ್ಟರಿಗೆ,ನೀನು ಅದೃಷ್ಟವಂತ ಆದುದರಿಂದಲೇ ಇಲ್ಲಿಗೆ ಬಂದಿರುವೆ, ನಿನಗೆ ತಪ್ಪದೆ ಶ್ರೀವಲ್ಲಭರ ದರ್ಶನವು ದೊರೆಯುವದು.ಬಈ ಗುಹೆಯ ಬಾಗಿಲಲ್ಲಿ ಇರುವವನು ಒಬ್ಬ ಜ್ಞಾನಿ, ಅವನ ಹೆಸರು ವ್ಯಾಘ್ರೇಶ್ವರಶರ್ಮ ಎಂಬುದಾಗಿ ಹೇಳಿ ಭಟ್ಟರನ್ನು ಒಳಗೆ ಕರೆದೊಯ್ದರು. ಹಿಂದೆ ಆಂದ್ರಪ್ರದೇಶದ ಗೋದಾವರಿ ತೀರದಲ್ಲಿ ಆತ್ರೇಯಪುರ ಎಂಬ ಒಂದು ಗ್ರಾಮದಲ್ಲಿ ಕಾಶ್ಯಪ ಗೋತ್ರದ ಬ್ರಾಹ್ಮಣನಿಗೆ ವ್ಯಾಘ್ರೇಶ್ವರಶರ್ಮ ಎಂಬ ಮಗನಿದ್ದನು. ತಂದೆಯು ಮಹಾ ಪಂಡಿತ ಆದರೆ ಮಗ ಮಾತ್ರ ಶುದ್ಧದಡ್ಡ. ಯಾವ ವಿದ್ಯೆಯೂ ಹತ್ತಲಿಲ್ಲ ಸಂಧ್ಯಾವಂದನೆ ಕೂಡ ಮಾಡಲೂ ಬರುತ್ತಿರಲಿಲ್ಲ. ಒಂದು ದಿನ ಆತನಿಗೆ ಶ್ರೀಪಾದವಲ್ಲಭರು ಸ್ವಪದಲ್ಲಿ ಬಂದು ದಿವ್ಯ ಜ್ಯೋತಿಯು ರೂಪದಲ್ಲಿ ಕಾಣಿಸಿಕೊಂಡು ಹಿಮಾಲಯದಲ್ಲಿರುವ ಬದರಿಕಾರಣ್ಯಕ್ಕೆ ಹೋಗಲು ಹೇಳಿ, ಅಲ್ಲಿರುವ ಕೆಲವು ಮಹಾತಪಸ್ವಿಗಳ ಕೃಪಾಕಟಾಕ್ಷದಿಂದ ಆತ್ಮಜ್ಞಾನವು ಸಿದ್ದಿಸಿ ಕಲ್ಯಾಣವಾಗುತ್ತದೆ ಎಂದು ಆದೇಶಿಸಿದರು. ವ್ಯಾಘ್ರೇಶ್ವರನು ಹಾಗೆಯೇ ಮಾಡಿ ಅಲ್ಲಿನ ಸಿದ್ಧಪುರುಷರೊಬ್ಬರ ಅಪ್ಪಣೆಯಂತೆ ವ್ಯಾಘ್ರವನ್ನೇ ಕುರಿತು ಕಠಿಣ ತಪಸ್ಸನ್ನಾಚರಿಸಿ ಬೇಕೆಂದಾಗ ವ್ಯಾಘ್ರರೂಪವನ್ನೇ ಧರಿಸುವ ಸಿದ್ಧಿಯನ್ನು ಸಿದ್ಧಿಸಿಕೊಂಡಿದ್ದನು.
ಈ ವ್ಯಾಘ್ರವೇ ಆ ವ್ಯಾಘ್ರೇಶ್ವರಶರ್ಮರು ಹಾಗೂ
ಈ ವ್ಯಾಘ್ರದ ಮೇಲೆ ಆಸೀನರಾಗಿ ಶ್ರೀಪಾದವಲ್ಲಭರು ಭಕ್ತರಿಗೆ ದರ್ಶನಕೊಟ್ಟು ತಾವೇ ಧರ್ಮಶಾಸ್ತ (ಅಯ್ಯಪ್ಪ ಸ್ವಾಮಿ) ಎಂಬುದಾಗಿ ತಿಳಿಯಪಡಿಸಿದ್ದಾರೆ ಎಂದು ವೃದ್ಧ ತಪಸ್ವಿಗಳು ಶಂಕರಭಟ್ಟರಿಗೆ ತಿಳಿಸಿದರು.

॥ಶ್ರೀಪಾದ ರಾಜಂ ಶರಣಂ ಪ್ರಪದ್ಯೇ॥

-ರಾಮಚಂದ್ರ , ಬಾಲಗಂಚಿ

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!