Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಅವಧೂತ ಮಹಿಮೆ / Avadhūta Mahime

ಶ್ರೀಪಾದ ಶ್ರೀವಲ್ಲಭ ಚರಿತ್ರೆ 3 Sri Pada Sri Vallabha Charitre 3

Published

on

ಕನ್ನಡ1 of 2
To Change Language, Click ← → (arrow) Button

 

ಶಂಕರಭಟ್ಟರು ಮರುದಮಲೈನಲ್ಲಿ ನಡೆದ ಆಶ್ಚರ್ಯಕರ ಸಂಗತಿಗಳನ್ನು ಮೆಲುಕುಹಾಕುತ್ತಾ ಮುಂದೆ ನಡೆದು ಅನೇಕ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿದರು. ಮಾರ್ಗದಲ್ಲಿ ಅನಾಯಾಸವಾಗಿ ಭೋಜನವು ದೊರೆಯುತ್ತಿತ್ತು.

ಪಾಂಡ್ಯದೇಶದ ಕದಂಬವನವನದಲ್ಲಿ ಒಂದು ಮಹಾಪ್ರಭಾವಯುಕ್ತವಾದ ಶಿವಮಂದಿರವನ್ನು ದರ್ಶನಗೈದು , ಹತ್ತಿರದ ಅಶ್ರಮದಲ್ಲಿ ಶ್ರೀ ಸಿದ್ದಯೋಗಿಗಳೆಂಬ ಮಹಾತ್ಮರ ದರ್ಶನವನ್ನು ಮಾಡಲು ಹೋದಾಗ, ಮಗು ನೀನು ನೋಡಿದ ಶಿವಲಿಂಗವು ಮಹಾಮಹಿಮಾನ್ವಿತವಾದದ್ದು. ಪೂರ್ವದಲ್ಲಿ ದೇವೆಂದ್ರನು ಅನೇಕ ರಾಕ್ಷಸರನ್ನು ಯುದ್ದದಲ್ಲಿ ಗೆದ್ದನು. ಅವರುಗಳಲ್ಲಿ ಒಬ್ಬನು ತಪ್ಪಿಸಿಕೊಂಡು ಓಡಿಹೋಗಿ ತಪಸ್ಸುಮಾಡತೊಡಗಿದನು.ತಪೋನಿರತನಾಗಿದ್ದ ಆ ರಾಕ್ಷಸರನ್ನು ಇಂದ್ರನು ಕೊಂದುಹಾಕಿದನು.ತಪೋನಿರತನನ್ನು ಕೊಂದಪಾಪದ ಪ್ರಭಾವದಿಂದ ಇಂದ್ರನು ತನ್ನ ತೇಜಸ್ಸನ್ನು ಕಳೆದುಕೊಂಡಾಗ ಅದರ ಪರಿಹಾರಕ್ಕಾಗಿ ಇಂದ್ರನು ಅನೇಕಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿದನು. ಪಾಂಡ್ಯ ದೇಶದ ಈ ಪ್ರದೇಶಕ್ಕೆ ಬಂದಕೂಡಲೇ ಅವನಲ್ಲಿದ್ದ ಪಾಪಗಳ ಸಮೂಹವು ಆಶ್ಚರ್ಯಕರವಾಗಿ ಹೊರಟುಹೋದವು. ಹೀಗಾಗಿ ಇಲ್ಲಿ ಏನೋಹೆಚ್ಚುಗಾರಿಕೆ ಇದೆಯೆಂದು ಹುಡುಕತೊಡಗಿದಾಗ ಅವನಿಗೆ ಅಲ್ಲಿ ಒಂದು ಶಿವಲಿಂಗವು ಕಾಣಿಸಿತು, ಇಂದ್ರನು ಆ ಲಿಂಗಕ್ಕೆ ಭಕ್ತಿಯಿಂದ ಪೂಜಿಸಿ ಒಂದು ದೇವಾಲಯವನ್ನು ನಿರ್ಮಿಸಿದ. ಅದೇ ಶಿವಲಿಂಗವು ಸಮಸ್ತ ಪಾಪಪರಿಹಾರಕವೂ ಸರ್ವಮಂಗಳಪ್ರದವೂ ಆಗಿರುವದು ಎಂಬುದಾಗಿ ಸಿದ್ದಯೋಗಿಗಳು ಪ್ರಸಾದವನ್ನು ಕೊಟ್ಟು ಭಟ್ಟರಿಗೆ ಹೇಳಿದರು.
ಅಲ್ಲಿಯೇ ವಿಶ್ರಮಿಸಿದ ಭಟ್ಟರು
ಮಾರನೆದಿನ ಬೆಳಿಗ್ಗೆ ಎದ್ದಾಗ ಎತ್ತರದ ಗುಡ್ಡದಮೇಲೆ ಒಂದುಅರಳಿಮರದ ಬುಡದಲ್ಲಿ ಮಲಗಿದ್ದರು.ಸುತ್ತಲೂ ಜನ ಸಂಚಾರವೇ ಇಲ್ಲ, ಸಿದ್ದಯೋಗಿಗಳನ್ನು ಕಂಡದ್ದು ಭ್ರಮೆ ಎನಿಸತೊಡಗಿತು.
ಭಟ್ಟರ ಪ್ರಯಾಣ ಮುಂದುವರೆಯಿತು ಮಧ್ಯಾನ್ಹಕ್ಕೆ ಹಸಿವಿನಬಾಧೆ ಹೆಚ್ಚಾಗ ತೊಡಗಿತು , ಗುಡ್ಡುಗಾಡು ಜನರು ಜೇನುತುಪ್ಪ ಹಣ್ಣು ಕೊಟ್ಟರು, ಅವುಗಳನ್ನು ತಿನ್ನುಬೇಕನ್ನುವಾಗ ಒಂದು ಕಾಗೆಯು ಬಂದು ತಲೆಯನ್ನು ಕುಕ್ಕತೊಡಗಿತು.ಭಟ್ಟರು ಓಡಲು ನೋಡಿದರು ಮತ್ತಷ್ಟು ಕಾಗೆಗಳು ಬಂದವು ಅವೂಕೂಡ ಕುಕ್ಕತೊಡಗಿದವು.ದೇಹವೆಲ್ಲ ರಕ್ತಮಯ ಈಗ ಏನನ್ನೂ ತಿನ್ನಲಾಗಲಿಲ್ಲ.ಮುಂದೆ ಓಡಿದಷ್ಟೂ ಕಾಗೆಗಳು ಹಿಂಬಾಲಿಸಿದವು.ಸಾಕಷ್ಟು ಬಳಲಿಕೊನೆಗೆ ಒಂದು ಔದುಂಬರ ವೃಕ್ಷದಬಳಿಗೆ ಬಂದರು ಶ್ರೀಪಾದವಲ್ಲಭರಿಗೆ ಶರಣಾದರು.ಅವರ ದೇಹದಿಂದ ಕೆಟ್ಟವಾಸನೆ ಬರತೊಡಗಿತ್ತು,ಈಗ ದೊಡ್ಡದೊಡ್ಡ ಸರ್ಪಗಳು ಬಂದು ಅವರನ್ನು ಕಚ್ಚಿ ಹೋಗುತ್ತಿದ್ದವು. ಸಾಯಂಕಾಲವಾಗತೊಡಗಿತು,ಕೆಲವು ಅಗಸರು ಆ ಮಾರ್ಗದಲ್ಲಿ ಹೋಗುವವರು ಬಂದು ಅವರ ಈ ಸ್ಥಿತಿಯನ್ನು ಕಂಡು ಕೊನೆಗೆ ವಲ್ಲಭದಾಸನೆಂಬ ಒಬ್ಬ ಚಮ್ಮಾರನ ಬಳಿ ಕರೆದೊಯ್ದರು, ಚಮ್ಮಾರನ ಬಳಿ ಭಟ್ಟರಿಗೆ ಚಿಕಿತ್ಸೆ ಲಭಿಸಿತು. ಆ ಚಮ್ಮಾರನು ಶ್ರೀಪಾದರ ಭಕ್ತ. ಆ ಚಮ್ಮಾರನಿಂದ ಭಟ್ಟರಿಗೆ ಉಪದೇಶವಾಯಿತು.

ಮುಂದುವರಿಯುವುದು…

॥ ಶ್ರೀಪಾದರಾಜಂ ಶರಣಂ ಪ್ರಪದ್ಯೇ ॥

– ರಾಮಚಂದ್ರ, ಬಾಲಗಂಚಿ

ಕನ್ನಡ1 of 2
To Change Language, Click ← → (arrow) Button

1 ಅಭಿಪ್ರಾಯ

1 Comment

  1. Adiseshanb

    October 30, 2017 at 2:54 pm

    ಬಹಳ ಉಪಯುಕ್ತ,ಮತ್ತು ಈ ಜೀವನದಲ್ಲಿ ಅವಶ್ಯ ಪರಿಪಾಲಿಸಬೇಕಾದ ಸದಾಚಾರ,ಸದ್ವಿಷಯಗಳನ್ನು ಅರುಹಿ ಮಾನವರನ್ನು ಸದ್ವಿಚಾರಸಂಪನ್ನರಾಗಿ ಮಾಡುತ್ತಿರುವ ತಮ್ಮ ಸತ್ಕಾರ್ಯಕುಶಲತೆಗೆ, ಪಾದಾಭಿವಂದನೆಗಳು, ಅಭಿನಂದನೆಗಳು.ನಮ್ಮ ಜೀವನ ಧನ್ಯವಾಯಿತು. ಧನ್ಯೋಸ್ಮಿ.ಪುನರ್ಧನ್ಯಃ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!