Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಕೃತ್ತಿಕೋತ್ಸವ – ಶಿಖರದ ಹುಣ್ಣಿಮೆ Kruttikothsava – Hunnime of the Shikhara

Published

on

ಕನ್ನಡ1 of 2
To Change Language, Click ← → (arrow) Button

ಕೃತ್ತಿಕೋತ್ಸವ

ದೀಪಗಳ ಮಾಸ ಕಾರ್ತೀಕದಲ್ಲಿ ಬರುವ ಹುಣ್ಣಿಮೆಯಂದು ಕೃತ್ತಿಕಾ ನಕ್ಷತ್ರ ಇರುವಾಗ ದೇವರಿಗೆ ರಾತ್ರಿ ಸಲ್ಲಿಸುವ ದೀಪಾರಾಧನ ಸೇವೆಯೇ ಕೃತ್ತಿಕೋತ್ಸವ. ಈ ದಿನ ರಾತ್ರಿ 9 ಗಂಟೆ ಸುಮಾರಿಗೆ ಬೆಟ್ಟದ ಶ್ರೀ ಭವಾನಿ ಮಲಹಾನಿಕರೇಶ್ವರರ ಸನ್ನಿಧಿಯಲ್ಲಿ ರಂಗಪೂಜೆಯಾದ ಬಳಿಕ ದೇವಳದ ಎದುರಿನ ಪ್ರಾಂಗಣದಲ್ಲಿ ಪರಕಾಳಿ ದಹನ ನಡೆಯುತ್ತದೆ. ನಂತರ ಜಗದ್ಗುರುಗಳಿಂದ ಲಕ್ಷದೀಪೋತ್ಸವಕ್ಕೆ ಚಾಲನೆ ದೊರೆಯುತ್ತದೆ. ರಾಜಬೀದಿಯ ಇಕ್ಕೆಲಗಳಲ್ಲಿರುವ ಸಾಲುದೀಪಗಳ ನಡುವೆ ಶ್ರೀಭವಾನಿಮಲಹಾನಿಕರೇಶ್ವರರ ಉತ್ಸವವು ಶ್ರೀಮಠಕ್ಕೆ ಆವರಣಕ್ಕೆ ಆಗಮಿಸುತ್ತದೆ. ಶ್ರೀಶಾರದಾಂಬ,ಶ್ರೀಆದಿ ಶಂಕರ, ಶ್ರೀವಿದ್ಯಾಶಂಕರರ ಸನ್ನಿಧಿಗಳಲ್ಲಿ ರಂಗಪೂಜೆ ನೆರವೇರಿದ ಬಳಿಕ ತುಂಗೆಯಲ್ಲಿ ಜಗದ್ಗುರುಗಳ ಸಮ್ಮುಖದಲ್ಲಿ ಪಂಚದೇವರುಗಳ ತೆಪ್ಪೋತ್ಸವವು ವಿಜೃಂಭಣೆಯಿಂದ ನೆಡೆಯುತ್ತದೆ.

.    ಮಲಹಾನಿಕರೇಶ್ವರ ದೇವರ ಪ್ರಾಕಾರೋತ್ಸವ

 

ಶಿಖರದ ಹುಣ್ಣಿಮೆ

ಶ್ರೀಭವಾನೀಮಲಹಾನಿಕರೇಶ್ವರರ ಆಲಯದ ಶಿಖರದಲ್ಲಿರುವ ಕಳಸದ ಸುತ್ತಲೂ ಅಕ್ಕಿಹಿಟ್ಟಿನಿಂದ ನಿರ್ಮಿತ ಹಣತೆಯಲ್ಲಿ ದೀಪ ಹಚ್ಚುತ್ತಿದ್ದರು. ಈ ಅಕ್ಕಿಹಿಟ್ಟಿನ ಹಣತೆಗಳು ಶೃಂಗೇರಿ ಪಟ್ಟಣದ ಅದರಲ್ಲೂ ವಿಶೇಷವಾಗಿ ಮಲಹಾನಿಕರೇಶ್ವರ
ಬೆಟ್ಟದ ತಪ್ಪಲಿನಲ್ಲಿರುವ ಮಲ್ಲಪ್ಪನಬೀದಿಯ ಪ್ರತಿ ಮನೆಗಳಿಂದ ಭಕ್ತಿಭಾವದಿಂದ ಸಮರ್ಪಿತವಾಗುತ್ತಿದ್ದವೆಂದು ಹಿರಿಯರಿಂದ ತಿಳಿದು ಬಂದ ಅಪರೂಪದ ಸಂಗತಿ. ಶಿಖರದ ಹುಣ್ಣಿಮೆ ಆಡು ಭಾಷೆಯಲ್ಲಿ ಶುಕ್ರದ ಹುಣ್ಣಿಮೆಯಾಗಿತ್ತು.

 ಜಗದ್ಗುರು ಮಹಾಸ್ವಾಮಿಗಳಸಮ್ಮುಖದಲ್ಲಿ  ಪರಕಾಳಿದಹನ

  ‌‌              ದಹದಗಿಸುತ್ತಿರುವ ಪರಕಾಳಿ

 

ಇಂದಿನಿಂದ ಶೃಂಗೇರಿ ಪರಿಸರದಲ್ಲಿರುವ ದೇವಾಲಯಗಳಲ್ಲಿ ಕಾರ್ತೀಕ ದೀಪೋತ್ಸವಗಳು ಪ್ರಾರಂಭವಾಗುತ್ತದೆ.

  ಜಗದ್ಗುರು ಮಹಾಸ್ವಾಮಿಗಳಿಂದ ಲಕ್ಷದೀಪೋತ್ಸವಕ್ಕೆ     ಚಾಲನೆ.

ಆಗಮಿಕವಾಗಿ ನೆಡೆಯುವ ರಂಗಪೂಜೆ, ಪರಕಾಳಿ ದಹನ, ಲಕ್ಷದೀಪೋತ್ಸವ ಮತ್ತು ತೆಪ್ಪೋತ್ಸವಾದಿ ಆಚರಣೆಗಳು ಏಕಕಾಲದಲ್ಲಿ ಜಗತ್ತಿನಲ್ಲಿ ಶೃಂಗೇರಿಯಲ್ಲಿ ಮಾತ್ರ ನೆಡೆಯುವುದು ವಿಶೇಷ.

ಇದೆ ಶನಿವಾರ (ನವೆಂಬರ್ 4) ಶೃಂಗೇರಿಯಲ್ಲಿ ಈ ಆಚರಣೆಗಳು ನೆರವೇರಲಿದ್ದು ಇದರಲ್ಲಿ ಭಾಗವಹಿಸಿ ತಮ್ಮ ಜನ್ಮ ಕೃತಕೃತ್ಯರಾಗಿಸಿಕೊಳ್ಳಲೊಂದು ಸದವಕಾಶವಾಗಿದೆ.

 

   ತುಂಗಾ ನದಿಯಲ್ಲಿ ಪಂಚದೇವರುಗಳ ತೆಪ್ಪೋತ್ಸವ

 

 

 

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!