Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

 ಗುರು ಮಹಿಮೆ – 2 (Gurumahime -2)

Published

on

ಕನ್ನಡ1 of 2
To Change Language, Click ← → (arrow) Button

ಗುರು ಮಹಿಮ -2

ಜಗದ್ಗುರು ಮಹಾಸ್ವಾಮಿಗಳಿಗೆ ತಮ್ಮ ಶರೀರದ ಬಂಧನದಿಂದ ಬಿಡುಗಡೆಯಾಗುವ ಕಾಲ ಸನ್ನಿಹಿತವಾಗುತ್ತಿದೆಯೆಂದು ಅರಿವಾಗುತ್ತಿತ್ತು.ಅದಕ್ಕೆ ಮೊದಲೇ ಒಮ್ಮೆ ಗೋಕರ್ಣ ಕ್ಷೇತ್ರಕ್ಕೆ ಪ್ರಯಾಣ ಬೆಳಸಿ,ಶ್ರೀ ಮಹಾಬಲೇಶ್ವರ ಸ್ವಾಮಿಯನ್ನು ದರ್ಶಿಸಿ ಪೂಜಿಸಬೇಕೆಂಬ ತೀವ್ರವಾದ ಅಪೇಕ್ಷೆಯೂ ಇತ್ತು.ಆದರೆ ಅವರ ಶರೀರವು ತುಂಬಾ ಗಳಿತವಾಗಿದ್ದರಿಂದಲೂ,ಅವರನ್ನು ನೂರಾರು ಮೈಲಿಗಳಷ್ಟು ದೂರ ಪ್ರಯಾಣ ಮಾಡಿಸುವ ಧೈರ್ಯವು ಮಠದಲ್ಲಿ ಯಾರಿಗೂ ಇರಲಿಲ್ಲ.ಆದ್ದರಿಂದ ಅವರು ಗೋಕರ್ಣಕ್ಕೆ ಪ್ರಯಾಣ ಬೆಳಸಬೇಕೆಂಬ ಇಚ್ಛೆಯನ್ನು ಪದೇ ಪದೇ ವ್ಯಕ್ತಪಡಿಸುತ್ತಿದ್ದರೂ ಯಾರೂ ಅದನ್ನು ನೆಡೆಸುವ ಯತ್ನವನ್ನೇ ಮಾಡಿರಲಿಲ್ಲ.ಆದರೆ ಶ್ರೀ ನೃಸಿಂಹಭಾರತೀಗಳವರು ಸಿದ್ಧ ಸಂಕಲ್ಪರಾಗಿದ್ದರು.ನೆನೆಸಿಕೊಂಡಿದ್ದನ್ನು ನೆರವೇರಿಸಿ ಬಿಡುತ್ತಿದ್ದರು.

ತಮ್ಮ ನಿರ್ಯಾಣಕ್ಕೆ ಮೊದಲ ದಿನ ಗುರುಗಳು ಮಲಗಿದ್ದಂತೆಯೇ ಮಾತನಾಡತೊಡಗಿದರು.ಆ ಮಾತುಗಳು ಹತ್ತಿರವಿದ್ದಂತವರಿಗೆಲ್ಲರಿಗೂ ಏನೆಂದು ಅರ್ಥವಾಗದಿದ್ದರೂ,ಕೆಲವರಿಗೆ ಅರ್ಥವಾಗಿತ್ತು.”ನಮ್ಮನ್ನು ಕರೆದುಕೊಂಡು ಹೋಗಲು ಗೋಕರ್ಣದಿಂದ ಮಹಾಜನಗಳು ಬಂದಿದ್ದಾರೆ.ಮೇನೆ ಸಿದ್ಧವಾಗಿದೆಯೇ? ನಮ್ಮನ್ನು ಅದರಲ್ಲಿ ಕುಳ್ಳಿರಿಸಿ ಎಂದು ಅಜ್ಞಾಪಿಸಿದರು.ಬಳಿಕ ಸುಮಾರು ಒಂದೆ ಗಂಟೆಯ ನಂತರ ‘ಇದೇನು ಆಶ್ಚರ್ಯ!ಇಷ್ಟು ಜಾಗ್ರತೆಯಾಗಿ ನಮ್ಮನ್ನು ಗೋಕರ್ಣಕ್ಕೆ ಕರೆದುಕೊಂಡು ಹೋಗಿ,ಮತ್ತೆ ಹಿಂದಕ್ಕೆ ಕರೆದುಕೊಂಡು ಬಂದು ಬಿಟ್ಟಿದ್ದಾರೆ? ನಮ್ಮ ಪಾಲಕಿಯ ಬೋಯಿಗಳು ಮಹಾಶಕ್ತರು,ಅವರಿಗೆಲ್ಲಾ ಇನಾಮನ್ನು ಕೊಡಿ!” ಎಂದು ನುಡಿದು ಮೌನವಾದರು.ಅವರ ಹತ್ತಿರವೇ ಇದ್ದ ಪರಿಜನರಲ್ಲಿ ಸ್ವಲ್ಪ ಮಾತ್ರವೇ ಈ ಮಾತುಗಳೆಲ್ಲಾ ಸೂತ್ರಪ್ರಾಯವಾಗಿದ್ದಂತಹ ಗುರುಗಳವರ ಗೋಕರ್ಣ ಕ್ಷೇತ್ರ ಯಾತ್ರೆಯ ಸಂಕಲ್ಪವು ಗೋಚರವಾಯಿತು.

ಮಾರನೆಯ ದಿನ ಪ್ರಾತಃಕಾಲದಲ್ಲಿ ಶ್ರೀ ನೃಸಿಂಹಭಾರತೀ ಸ್ವಾಮಿಗಳವರು ತಮ್ಮ ಪಾಂಚಭೌತಿಕ ಶರೀರವನ್ನು ಬಿಟ್ಟು ಸರ್ವವ್ಯಾಪಿಯಾದರು.ಆಗ ಶಿಷ್ಯರಾಗಿದ್ದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳವರಿಗೆ 22 ವರ್ಷಗಳು ಮಾತ್ರ ವಯಸ್ಸು.ಸತತ ಹದಿಮೂರು ವರ್ಷಗಳ ಕಾಲ ತಮಗೆ ಮಾರ್ಗದರ್ಶನ ಮಾಡಿದ್ದಂತಹ ಗುರುಗಳು ಇನ್ನಿಲ್ಲವಲ್ಲ ಎಂದು ಶಿಷ್ಯಸ್ವಾಮಿಗಳಿಗೆ ತುಂಬಾ ದುಃಖವಾಯಿತು.ಸನ್ಯಾಸ ಸ್ವೀಕರಿಸಿ ಸರ್ವ ಬಾಂಧವ್ಯವನ್ನು ಮೀರಿದ್ದರೂ ಸಹ ಗುರುಭಕ್ತಿಯಿಂದಲೂ,ತಮ್ಮ ಗುರುಗಳವರಲ್ಲಿದ್ದ ಅವ್ಯಾಜವಾದ ಪ್ರೇಮದಿಂದಲೂ ಶಿಷ್ಯ ಯತಿವರ್ಯರು ದುಃಖಿಸಿದರು.

ಯೋಗಶಾಸ್ತ್ರ ವಿಶಾರದರಿಗೆ ಅಷ್ಟಸಿದ್ಧಿಗಳೂ ಕೈಯ್ಯಾಳುಗಳಾಗಿರುತ್ತವೆ.ಅವಶ್ಯಕತೆ ಬಂದಾಗ ಮಾತ್ರ ಅವರು ಆ ಸಿದ್ಧಿಗಳ ಉಪಯೋಗ ಪಡೆಯುತ್ತಾರೆ. ಶ್ರೀ ವೃದ್ಧನೃಸಿಂಹ ಭಾರತೀ ಮಹಾಸ್ವಾಮಿಗಳು ಪತಂಜಲಿ ಯೋಗ ಸೂತ್ರಗಳ ವಿಭೂತಿ ಪಾದದ ಎಲ್ಲಾ ಸಿದ್ಧಿಗಳನ್ನು ಪಡೆದಿದ್ದರು.

ದಿವ್ಯಾತ್ಮರಾದ ಗುರುಗಳು ಸ್ವಶರೀರವನ್ನು ಇದ್ದಲ್ಲಿಯೇ ಬಿಟ್ಟು ಸೂಕ್ಷ್ಮ ಶರೀರದಲ್ಲಿ ಶ್ರೀ ಮಹಾಬಲೇಶ್ವರನ ದರ್ಶನ ಮಾಡಿ ಕೈವಲ್ಯವನ್ನು ಪಡೆದಿದ್ದರು.ಯೋಗಿಗಳಿಗೆ ಯಾವುದು ತಾನೆ ಅಸಾಧ್ಯ?

ಗೋಕರ್ಣದಲ್ಲಿದ್ದ ಗೋಪಾಲಶಾಸ್ತ್ರೀ ಎಂಬ ಋತ್ವಿಕರಿಗೆ ಗುರುಗಳ ನಿರ್ಯಾಣದ ಸುದ್ದಿ ತಲುಪಿದಾಗ ಬಹಳ ಆಶ್ಚರ್ಯವಾಯಿತು.ಆತನಿಗೆ ನಂಬಲಾಗಲಿಲ್ಲ.ಯತಿವರ್ಯರ ನಿರ್ಯಾಣದ ಹಿಂದಿನ ದಿನ ಆತನಿಗೆ ದಿವ್ಯಸ್ವಪ್ನವಾಗಿತ್ತು.ಗುರುಗಳು ಮೇನೆಯಲ್ಲಿ ಗೋಕರ್ಣಕ್ಕೆ ದಯಮಾಡಿಸಿ,ತನ್ನ ಯೋಗಕ್ಷೇಮ ವಿಚಾರಿಸಿ,ತದನಂತರ ಮಹಾಬಲೇಶ್ವರ ದರ್ಶನಕ್ಕೆ ವಿಜಯ ಮಾಡಿಸಿ ಶ್ರೀ ಸ್ವಾಮಿಗೆ ಪೂಜಾಕೈಂಕರ್ಯ ನೆರವೇರಿಸಿ ಹಿಂತಿರುಗಿದಂತೆ ಕನಸಾಗಿತ್ತು.ಯೋಗಿಗಳು- ಜ್ಞಾನಿಗಳು ಅವರ ಸ್ಥೂಲ ಶರೀರವನ್ನು ಇದ್ದಲ್ಲಿಯೇ ಬಿಟ್ಟು,ಮತ್ತೊಂದು ಶರೀರವನ್ನು ಧರಿಸಬಲ್ಲರೆಂಬುದಕ್ಕೆ ಇದೊಂದು ದಿವ್ಯ ನಿದರ್ಶನವಲ್ಲವೇ?ಆ ಕನಸಾದ ಮರುದಿನ ಯತಿಶ್ರೇಷ್ಠರ ನಿರ್ಯಾಣವಾಗಿತ್ತು.ಇದನ್ನು ಗೋಪಾಲಶಾಸ್ತ್ರೀಗಳಿಂದ ತಿಳಿದವರಿಗೆ ಪರಮಯೋಗಿಗಳಾಗಿದ್ದ ಗುರುಗಳು ಪಾಂಚಭೌತಿಕ ಶರೀರವನ್ನು ಬಿಟ್ಟಿದ್ದರೂ ಸರ್ವವ್ಯಾಪಿಯಾಗಿದ್ದರೆಂಬುದರಲ್ಲಿ ಸಂದೇಹವಿರಲಿಲ್ಲ.ಮಹಾತ್ಮರನ್ನು ಎಲ್ಲರು ಸ್ಮರಿಸುತ್ತಾ ಮರೆಯಾಗಿದ್ದ ಅವರನ್ನು ನೂತನ ಪೀಠಾಧಿಪತಗಳಾದ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳಲ್ಲಿ ದರ್ಶಿಸುತ್ತಿದ್ದರು.

ಕನ್ನಡ1 of 2
To Change Language, Click ← → (arrow) Button

2 ಅಭಿಪ್ರಾಯಗಳು

2. ಅಭಿಪ್ರಾಯಗಳು

 1. shashikumar

  May 27, 2017 at 3:38 am

  thank you for this guru mahaathme

  • admin

   May 28, 2017 at 7:54 am

   Ty

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!