Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಸನಾತನ ಭಾರತ / Sanathana Bharatha

स्वस्त्यस्तु वः पथि सदा(Read in ಕನ್ನಡ &English)

Published

on

ಸ್ವಾಮಿ ವಿವೇಕಾನಂದರ ಕೈಬರಹದಲ್ಲಿ स्वस्त्यस्तु वः पथि सदा

1899 ರಲ್ಲಿ ಬೆಟ್ಟಿ ಮೆಕ್ಲಿಯೋನ್(Betty Meclion) ಮತ್ತು ಫ್ರಾನ್ಸಿಸ್ ಲೆಗ್ಗಟ್(Francis Leggette) ತಮ್ಮ ಮದುವೆಗಾಗಿ ಅಮೆರಿಕದಿಂದ ಪ್ಯಾರಿಸ್ ಗೆ ಬಂಧು ಬಳಗದೊಂದಿಗೆ ಹಡಗಿನಲ್ಲಿ ಹೊರಟಿದ್ದರು.ಇಬ್ಬರು ಸ್ವಾಮೀ ವಿವೇಕಾನಂದರ ಪರಮ ಭಕ್ತರಾಗಿ ಹತ್ತಿರದವರಾಗಿದ್ದರು.ತಮ್ಮ ವಿವಾಹಕ್ಕೆ ವಿವೇಕಾನಂದರನ್ನು ಒತ್ತಾಯದಿಂದ ಕರೆದಿದ್ದರು.ಹಡಗಿನ ಪ್ರಯಾಣ ಆರಂಭವಾಯಿತು.ಆ ಹಡಗಿನ ಅತಿಥಿಪುಸ್ತಕದಲ್ಲಿ ವಿವೇಕಾನಂದರು स्वस्त्यस्तु वः पथि सदा (ನಿಮ್ಮ ಪಯಣ ಸುಖವಾಗಿ ಸಾಗಲಿ) ಎಂದು ದೇವನಾಗರಿಯಲ್ಲಿ ಬರೆದು ಕೆಳಗೆ ಇಂಗ್ಲಿಷ್ ನಲ್ಲಿ ಸಹಿ ಹಾಕಿದ್ದರು.ಆ ದಿನಗಳಲ್ಲಿ ಅವರು ರಿಗ್ಲೇ ಮ್ಯಾನರ್(Ridgley Mannor)ಎಂಬಲ್ಲಿ ತಂಗಿದ್ದರು.ಅಲ್ಲಿ ಮೇಲಿನ ಘಟನೆ ನೆನಪಿಸುವ ಪುಟದ ಫೋಟೋ ಈಗಲೂ ಇದೆಯಂತೆ.

ಅಮೇರಿಕಾದವರಿಗೂ ಹಾಗೂ ರಿಗ್ಲೇ ಮ್ಯಾನರ್ ಸಂಬಂಧಿಸಿದವರಿಗೂ
ಹೆಚ್ಚಾಗಿ ದೇವನಾಗರಿ ಓದಲು ಬಾರದು.ಕೈ ಬರಹ ಸ್ಪಷ್ಟವಾಗಿರದಿದ್ದರಿಂದ
स्वस्त्यस्तु ಎಂಬುದನ್ನು ಸರಿಯಾಗಿ ಓದಲು ಬಂದಿರಲಿಲ್ಲ.ಆದ್ದರಿಂದ प क ಮುಂತಾದ ಅಕ್ಷರ ಅಲ್ಲಿ ತೋರುತ್ತದೆಂದು ಕೊಂಡು ತಪ್ಪಾಗಿ ಓದಿ ಅರ್ಥ ಹೊಂದದಾಗಿ ಈ ವಾಕ್ಯಕ್ಕೆ ಏನೋ ಒಂದು ಅರ್ಥ ಹೇಳುವ ಪ್ರಯಾಸ ಹಲವು ದಶಕಗಳಿಂದ ನಡೆದಿತ್ತು.ಸಂಸ್ಕೃತ ಭಾರತೀ ಕಾರ್ಯಕರ್ತರಾದ ಶ್ರೀಯುತ ವಸುವಜ್ ರವರು ಅಲ್ಲಿಗೆ ಹೋದಾಗ ವಿವೇಕಾನಂದರ ಕೈ ಬರಹದಲ್ಲಿದ್ದ ಈ ಸಂಸ್ಕೃತ ವಾಕ್ಯವನ್ನು ನೋಡಿ ಅಚ್ಚರಿಗೊಂಡು ಮಿಂಚಂಚೆಯ ಮೂಲಕ ಇದರ ಚಿತ್ರ ಕಳುಹಿಸಿದರು.ಕಂಪ್ಯೂಟರ್ ನ ಮೂಲಕ ಝೂಮ್ ಮಾಡಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ स्वस्त्यस्तु ಎಂಬುದು ಸರಿಯಾದ ಪದವೆಂದು ಅರಿವಿಗೆ ಬಂದಿತು.ಆಗ ಪ್ರಸಂಗಕ್ಕೆ ತಕ್ಕಂತೆ ಹೊಂದಿಕೊಂಡಿತು.ಇದರಿಂದ ಒಗಟಿನ ಗಂಟೊಂದು ಬಿಡಿಸಿದಂತಾಗಿ ‘ರಿಗ್ಲೇ ಮ್ಯಾನರ್’ನವರು ತುಂಬಾ ಸಂತಸಪಟ್ಟರು.

ರಿಗ್ಲೇ ಮ್ಯಾನರ್ ಈಗ ವಿವೇಕಾನಂದ ರಿಟ್ರೀಟ್ ಎಂದು ಹೆಸರುಪಡೆದಿದೆ.

ನ್ಯೂಯಾರ್ಕಿನಿಂದ ಉತ್ತರಕ್ಕೆ 150 ಕಿ.ಮೀ.ದೂರದಲ್ಲಿ ಸ್ಟೋನ್ ರಿಜ್ ಎಂಬ ಹಳ್ಳಿಯ ಬಳಿ 83 ಎಕರೆ ಜಾಗದಲ್ಲಿ ರೀಗ್ಲೇ ಮ್ಯಾನರ್ ಹರಡಿಕೊಂಡಿದೆ. ಸ್ವಾಮಿ ವಿವೇಕಾನಂದರು 1895 ರಲ್ಲಿ ಹತ್ತು ದಿನ ಮತ್ತು 1899ರಲ್ಲಿ ಹಲವಾರು ಇಲ್ಲಿ ವಾರಗಳ ಕಾಲ ವಾಸವಾಗಿದ್ದರು. ಭಾರತದ ಹೊರತಾಗಿ ದೀರ್ಘಕಾಲ ಅವರು ವಾಸ ಮಾಡಿದ್ದು ಇದೇ ಸ್ಥಳವಾದ್ದರಿಂದ ಇಲ್ಲಿಗೆ ಹೆಚ್ಚಿನ ಮಹತ್ವ ಬಂದಿದೆ.

ಇಲ್ಲಿರುವ ‘ಓಕ್’ ಮರದ ಕೆಳಗೆ ಕುಳಿತು ವಿವೇಕಾನಂದರು ಧ್ಯಾನ ಮಾಡುತ್ತಿದ್ದರು.ಆ ಮರ ಈಗಿಲ್ಲ.’ಥೌಸಂಡ್ ಐಲ್ಯಾಂಡ್’ ಎಂಬಲ್ಲಿ ‘ಪೈನ್’ ಮರದ ಕೆಳಗೂ ವಿವೇಕಾನಂದರು ಧ್ಯಾನ ಮಾಡಿದ್ದರು.ಆ ಪೈನ್ ಮರದ ಬೀಜ ತಂದು ಓಕ್ ಮರ ಒಣಗಿದ ಜಾಗದಲ್ಲಿ ಬಿತ್ತಿ ಮರವೊಂದನ್ನು ಇಂದು ಬೆಳೆಸಲಾಗಿದೆ.ಅದನ್ನು ನಾವಿಂದು ನೋಡಬಹುದಾಗಿದೆ.1993 ರಲ್ಲಿ ರಾಮಕೃಷ್ಣರ ಭಕ್ತರೆಲ್ಲರೂ ಸೇರಿ ಫ್ರಾನ್ಸಿಸ್ ನ ಮಗಳ ಮಗನ ಒಡೆತನದಲ್ಲಿದ್ದ ಈ ಜಾಗವನ್ನು ಕೊಂಡು “ವಿವೇಕಾನಂದ ರಿಟ್ರೀಟ್” ಎಂಬ ಹೆಸರಿನಲ್ಲಿ ಇಂದು ರಾಮಕೃಷ್ಣ ಪರಮಹಂಸರ ಸಂದೇಶವನ್ನು ಪ್ರಚುರ ಪಡಿಸುವ ಕೈಂಕರ್ಯ ಮಾಡುತ್ತಿದ್ದಾರೆ.

ಸಂಸ್ಕೃತ ದಿನಾಚರಣೆಯಾದ ಇಂದು ಸ್ವಾಮಿ ವಿವೇಕಾನಂದರ ದಿವ್ಯ ಚರಿತೆಯಿಂದ ಆಯ್ದ ಭಾಗದೊಡನೆ ಸ್ವಾಮಿಜೀ ಶ್ರೀಪಾದಗಳ ಸ್ಮರಣೆಗೈಯುತ್ತಾ..

ಕೃಪೆ : ಬುತ್ತಿ

ಜ್ಞಾನದ e magazine ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರುವ ವೈಶಿಷ್ಟ್ಯಪೂರ್ಣ ಮಾಹಿತಿಗಳನ್ನು ಪಡೆಯಲು www.jnanada.in ಅಥವಾ ನಮ್ಮ ಫೇಸ್ ಬುಕ್ ಪೇಜ್ ಜ್ಞಾನದ ಕ್ಕೆ ಭೇಟಿ ಕೊಡಿ..

English version

स्वस्त्यस्तु वः पथि सदा’ in the handwriting of Swami Vivekananda
In the year 1899, Betty Meclion and Francis Leggette traveled with their family and friends to Paris on a ship all the way from America to get married. The bride and groom were both staunch devotees of Swami Vivekananda. The couple had urged Swamiji to travel along to witness the marriage and bless them. The journey on the ship had commenced. In the guest book of the ship, Swamiji had written the words, ‘स्वस्त्यस्तु वः पथि सदा’ (may your journey be filled with happiness) in Devanagari and had signed his name under it. During those times, Swamiji was staying in a place called the Ridgley Manor. It is said that there is a photo commemorating the above event in the Manor even to this day.
Neither the Americans nor the people of Ridgley Manor were familiar with reading Devanagari. Also because it was handwritten, the word ‘स्वस्त्यस्तु’ wasn’t very legible. Some letters were mistakenly read and the quest to decipher the handwriting correctly, went on for years. Until once when Sri Vasuvaj who was a Kaaryakartha in Samskrutha Bharati visited the place. He mailed a copy of the writing which was zoomed in on a computer and was later rightly read as it was. With this, the people of Ridgley Manor were content.
Ridgley Manor is now known as Vivekananda retreat.
Ridgley Manor is spread over an area of 83 acres in a village called stone ridge, located about 150 kilometers to the north of New York city. Swamiji had stayed for 10 days in 1895 and for a few weeks in 1899. This was one of the few places where Swamiji spent a lot of time apart from his motherland and hence this place holds a lot of significance.
Swamiji used to meditate under an oak tree present in the vicinity. Unfortunately, the tree isn’t present anymore. He had also meditated under a pine tree in a place called the Thousand Island. A pine tree from that pine has been grown in the place where the oak once stood which can be seen even today. In the year 1993, devotees of Sri Ramakrishna joined together and bought the property belonging to Francis’ grandson and named it the Vivekananda retreat and have since stood to spread the message of Sri Ramakrishna Paramahamsa.
On this Sanskrit day, we offer salutations to Swami Vivekananda, reading an excerpt from his great life.
Source: Butti

To avail the various articles in both Kannada and english languages on our e-magazine Jnānadā, visit our website www.Jnanada.in or check out our facebook page ‘Jnānadā’ for more information.

Photo courtesy : Google 

1 ಅಭಿಪ್ರಾಯ

1 Comment

  1. ರವಿಕುಮಾರ್

    August 18, 2017 at 8:36 am

    ಉತ್ತಮ ಲೇಖನ ಧನ್ಯವಾದ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!