Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಅವಧೂತ ಮಹಿಮೆ / Avadhūta Mahime

ಶ್ರೀಪಾದ ಶ್ರೀವಲ್ಲಭ ಚರಿತ್ರೆ 5 Sri Pada Sri Vallabha Charite 5

Published

on

ಕನ್ನಡ1 of 2
To Change Language, Click ← → (arrow) Button

 

ವಿಚಿತ್ರಪುರದಿಂದ ಹೊರಟು ಶಂಕರಭಟ್ಟರು ಮುಂದೆ ಒಂದು ಹಳ್ಳಿ ತಲುಪಿದರು. ಒಂದು ಮನೆಯ ಮುಂದೆ ನಿಂತು ಭಿಕ್ಷೆಯಾಚಿಸಿದರು. ಗಯ್ಯಾಳಿಯಾದ ಮನೆಯೊಡತಿ ಬಂದು ಗದರಿಸಿದಳು ಹಾಗೂ ಯಜಮಾನರನ್ನೂ ಮನಸಾರೆ ಬೈದಳು. ಅವಳಿಗೆ ಕೋಪಬಂದರೆ ಯಜಮಾನರ ತಲೆಯಮೇಲೆ ಮನೆಪಾತ್ರೆಗಳನ್ನು ಒಡೆಯುತ್ತಿದ್ದಳು,ಅಷ್ಟೇ ಅಲ್ಲ ಅದರ ಬೆಲೆಯನ್ನೂ ಯಜಮಾನರೇ ಕೊಡಬೇಕಾಗುತ್ತಿತ್ತು. ಸರಿ ಶಂಕರಭಟ್ಟರು ಆ ಬ್ರಾಹ್ಮಣನ ಜೊತೆಸೇರಿ ಭಿಕ್ಷೆಬೇಡಲು ಹೊರಟರು,ಹಸಿವೆಯಿಂದ ಕಂಗೆಟ್ಟಿದ್ದರು.
ಅಷ್ಟರಲ್ಲಿ ವಿಚಿತ್ರಪುರದಿಂದ ರಾಜಭಟರು ಶಂಕರಭಟ್ಟರನ್ನು ಹುಡುಕಿಕೊಂಡು ಬಂದು,ಸ್ವಾಮಿ ತಮ್ಮದಯದಿಂದ ಯುವರಾಜರು ಮಾತನಾಡಲು ಆರಂಭಿಸಿದಮೇಲೆ ತಮಗೆ ಉಚಿತ ಉಪಚಾರ ಮಾಡದ್ದಕ್ಕಾಗಿ ನೊಂದ ಮಹಾರಾಜರು ತಮ್ಮನ್ನು ಕರೆತರಲು ಅಪ್ಪಣೆ ಕೊಟ್ಟಿದ್ದಾರೆ ಎಂದರು.
ಶಂಕರಭಟ್ಟರು ಆ ಬ್ರಾಹ್ಮಣನ ಜೊತೆಸೇರಿ ಹೊರಟರು,ಮಹಾರಾಜನು ಆ ಇಬ್ಬರನ್ನೂ ಸನ್ಮಾನಿಸಿದ.ಅವನ ಗಯ್ಯಾಳಿಹೆಂಡತಿಯ ಸ್ವಭಾವವೂ ಬದಲಾಯಿತು. ಅಲ್ಲಿಂದ ಹೊರಟು ಮಾಧವನಂಬೂದ್ರಿ ಎಂಬ ಬ್ರಾಹ್ಮಣನ ಜೊತೆಗೆ ಶಂಕರಭಟ್ಟರು ಚಿದಂಬರಂ ಹತ್ತಿರ ಬೆಟ್ಟದಕಣಿವೆಯಲ್ಲಿ ವೃದ್ಧತಪಸ್ವಿಗಳಾದ ಪಳನಿಸ್ವಾಮಿಗಳ ಬಳಿಗೆ ಹೋದಾಗ,ಸ್ವಾಮಿಗಳು ಶಂಕರಭಟ್ಟರನ್ನು ಕುರಿತು,ಲಾಭಾದ ಮಹರ್ಷಿಗಳ ಕಾಣಸಿದ್ಧಾಂತ,ಬ್ರಹ್ಮಕಮಲ ಹಾಗೂ ನಾಗಲೋಕವನ್ನು ವರ್ಣಿಸುತ್ತಾ ಮಗೂ ಸಮಸ್ತಸೃಷ್ಟಿಯನ್ನು ನಡೆಸುತ್ತಿರುವ ಮಹಾಸಂಕಲ್ಪವೇ ಶ್ರೀಪಾದವಲ್ಲಭರೂಪದಲ್ಲಿ ಅವತರಿಸಿದೆ,ಅವರ ಅವತಾರವು ಉನ್ನತವಾದ ಸೂಕ್ಷ್ಮ ಲೋಕಗಳಲ್ಲಿ ಯಾವಾಗಲೂ ನಡೆಯುತ್ತಲೇ ಇರುತ್ತದೆ,ಅವರು ನರರೂಪ ಧರಿಸಿಬರುವದು ನಮ್ಮೆಲ್ಲರ ಸುಕೃತ,ಅವರದು ಯೋಗಸಂಪೂರ್ಣ ಅವತಾರ,ಅವರ ಅಂಶ ಅವತಾರಗಳು ಯಾವಾಗಲೂ ಈ ಭುವಿಯಮೇಲೆ ಭಕ್ತರ ರಕ್ಷಣಾರ್ಥವಾಗಿ ಅವತರಿಸುತ್ತಲೇ ಇರುತ್ತವೆ,2498 ಎಂಬ ಶಬ್ದವು ಒಂದು ವಿಸ್ಮಯ ಸಂಖ್ಯೆಯಾಗಿದೆ ಎಂದು ಹೇಳಿ, ಗಾಯತ್ರಿಸ್ವರೂಪವೂ, ಪರಮಾತ್ಮನೂ, ಪರಾಶಕ್ತಿಯೂ ಕೂಡ ಅವರೇ ಎಂದರು.
ಕಾಲ,ಕರ್ಮ,ಕಾರಣ,ರಹಸ್ಯ ಗಳನ್ನು ಯಾರೂ ತಿಳಿಯಲಾರರು,ದತ್ತನು ಅಲ್ಪಸಂತೋಷಿ,ದತ್ತ ನಾಮವನ್ನು ಸ್ಮರಿಸುತ್ತ ಅನ್ನದಾನ ಮಾಡಿದವರಿಗೆ ಶೀಘ್ರದಲ್ಲಿ ವಿಶೇಷ ಫಲವು ಲಭಿಸುತ್ತದೆ,ಅನ್ನಸಾರದಲ್ಲಿನ ಸ್ವಲ್ಪ ಭಾಗವು ಮನಸ್ಸಾಗಿ ಮಾರ್ಪಾಡಾಗುವದು ಅನ್ನದಾತನ ಮನಸ್ಸು,ಬುದ್ದಿ,ಚಿತ್ತ,ಅಹಂಕಾರ,ಶರೀರ ಎಲ್ಲವೂ ಮಂಗಳಪ್ರದ ಸ್ವಭಾವದಿದಂದ ತುಂಬಿರುತ್ತದೆ,ಇದನ್ನೇ ಲಕ್ಷ್ಮಿಕಟಾಕ್ಷ ಎನ್ನುವುದು.
ಮಾಧವನಂಬೂದ್ರಿಗೆ ಈ ಜನ್ಮದಲ್ಲಿ ಶ್ರೀಪಾದರನ್ನು ಕಾಣುವ ಯೋಗವಿರಲಿಲ್ಲ ಆದರೆ ಕಾರಣನಿಮಿತ್ತವಾಗಿ ಒಂದು ನಾಗರಹಾವಿನಿಂದ ಕಚ್ಚಿಸಿಕೊಂಡು ಮರಣಾವಸ್ಥೆಯಲ್ಲಿ ಸೂಕ್ಷ್ಮರೂಪದಲ್ಲಿ ಕುರುವಪುರಕ್ಕೆ ಹೋಗಿ ಶ್ರೀಪಾದರ ದರ್ಶನ ಪಡೆದು ಬಂದ ಎಂದು ಹೇಳಿದರು.

ಶ್ರೀಪಾದರಾಜಂ ಶರಣಂ ಪ್ರಪದ್ಯೇ

 

– ರಾಮಚಂದ್ರ , ಬಾಲಗಂಚಿಗ

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!