Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಇತರೆ / Others

ಶ್ರೀಮಾತೆ ಶ್ರಿತಜನ ಪೋಷಿತೆ ಲಲಿತೆ -‌ 03

Published

on

 

ಅವರು ಸರಿಸುಮಾರು ೮೫ ವರ್ಷದ ವೃದ್ಧ. ವಯೋಸಹಜ ತೊಂದರೆಗಳಿಂದಾಗಿ ಕಣ್ಣು ಕಾಣಿಸುತ್ತಿರಲಿಲ್ಲ. ಸಾತ್ವಿಕ ಸ್ವಭಾವದವರು. ಗ್ರಾಮದೇವತೆಯ ಮೇಲೆ ಅಚಲವಾದ ಭಕ್ತಿ ಹೊಂದಿದ್ದವರು. ತಮಗಷ್ಟು ವಯಸ್ಸಾಗಿದ್ದರೂ, ಕಣ್ಣು ಕಾಣದಾಗಿದ್ದರೂ, ಅಂದಾಜಿನ ಮೇಲೆ ಕೋಲೂರಿಕೊಂಡು ನಿತ್ಯ ಅಮ್ಮನವರ ಗುಡಿಗೆ ಬರುತ್ತಿದ್ದರು. ೪-೫ ವರ್ಷಗಳಿಂದ ಒಂದು ದಿನವೂ ತಪ್ಪದೆ ಗುಡಿಗೆ ಬರುತ್ತಿದ್ದರು. ಕಣ್ಣಿಗೆ ಅಮ್ಮನವರ ಮೂರ್ತಿ ಕಾಣದಿದ್ದರೂ ಸಹ ಭಕ್ತಿಯಿಂದ “ಅವ್ವಾ” ಎನ್ನುತ್ತಾ ನಮಸ್ಕರಿಸಿ, ತೀರ್ಥ ಪ್ರಸಾದಗಳನ್ನು ಶ್ರದ್ಧಾಭಕ್ತಿಯಿಂದ ತೆಗೆದುಕೊಳ್ಳುತ್ತಿದ್ದರು. ಅಶೌಚವೇನಾದರೂ ಬಂದರೂ ದೇವಾಲಯದ ಹೊರಭಾಗದಲ್ಲಿ ಕುಳಿತುಹೋಗುತ್ತಿದ್ದರೋ ಹೊರತು ಗುಡಿಗೆ ಬಾರದಿರುತ್ತಿರಲಿಲ್ಲ.

ಹೀಗೆಯೇ ಒಂದು ಶುಕ್ರವಾರ ಗುಡಿಯಲ್ಲಿ ಅಮ್ಮನವರಿಗೆ ವಿಶೇಷ ಪೂಜೆ ನೆಡೆಯುತ್ತಿರಲು ಆ ವಯೋವೃದ್ದರೂ ಬಂದು ಅಮ್ಮನವರಿಗೆ ನಮಸ್ಕರಿಸಿ,”ಅವ್ವಾ” ಎನ್ನುತ್ತಾ ಒಂದು ಕಡೆ ಕುಳಿತುಕೊಳ್ಳುತ್ತಾರೆ. ಮಹಾಮಂಗಳಾರತಿಯೂ ಆಯಿತು. ಅರ್ಚಕರು ಒಳಗಿನಿಂದ ಆರತಿಯನ್ನು ತಂದು ಇವರಿಗೆ ತೆಗೆದುಕೊಳ್ಳಲು ಹೇಳಿದಾಗ ಅವರು ಆರತಿಯನ್ನು ತೆಗೆದುಕೊಂಡು,” ಅಲ್ಲಾ ಅಯ್ಯನೋರೇ, ಇವತ್ತೆಂಥಾ ಕೆಲಸ ಆಗ್ಹೋಯ್ತು, ನೀವೂ ಸುಮ್ನೆ ಪೂಜೆ ಮಾಡ್ತಾನೇ ಇದ್ರಲ್ಲಾ, ನಿಮ್ಗಾದ್ರೂ ತಿಳಿಬಾರ್ದೇ,” ಎನ್ನುತ್ತಾರೆ, ಅರ್ಚಕರು ” ಅಂತದೇನಾಯ್ತು ಗೌಡರೇ?,” ಎಂದಾಗ ಅವರು,” ಅಲ್ಲ ಬುದ್ದಿ ನೀವು ನೈವೇದ್ಯ ಮಾಡುವಾಗ ಒಬ್ಳು ದೊಡ್ಡ ಹೆಂಗಸು ಹಳದಿ ಸೀರೆ ಉಟ್ಟೋಳು, ನೋಡೋಕೆ ನಮ್ ಜನದ್ ತರ ಕಾಣ್ತಿದ್ಲು, ಅವಳು ಹೊರಗಿಂದ ಬಂದು ಸೀದಾ ಗರ್ಭಗುಡಿಗೇ ಹೋಗಿಬಿಡೋದಾ?, ನಾನ್ ಚೆನ್ನಾಗೇ ನೋಡ್ದೆ, ನೀವು ಸುಮ್ಕೆನೇ ಇರೋದಾ, ಗುಡಿ ಮೈಲಿಗೆ ಆಗಿಹೋಗ್ಲಿಲ್ವಾ?” ಎನ್ನುತ್ತಾನೆ. ತಕ್ಷಣ ಇದು ಅಮ್ಮನವರ ಲೀಲಾ ವಿನೋದವೇ ಎಂಬುದನ್ನು ತಿಳಿದ ಅರ್ಚಕರು ಮರಳಿ ,” ಅಲ್ಲಾ ಕಣಯ್ಯಾ ನಿನಗೆ ಕಣ್ಣು ಕಾಣೋಲ್ಲಾ ಅಲ್ವಾ ನಿನ್ಗೆ ಹೇಗೆ ಅವಳು ಕಂಡ್ಳು” ಎನ್ನಲು , ಆತ ” ಹೌದಲ್ವಾ , ಆದರೂ ನನಗೆ ಚೆನ್ನಾಗಿ ನೆನಪಿದೆ ಆ ಹೆಂಗಸು ಒಳಗೆ ಹೋಗಿದ್ ನಾನ್ ನೋಡ್ದೆ” ಎನ್ನುತ್ತಾ ಅದನ್ನೇ ಗೊಣಗುತ್ತಾ ದೇವಸ್ಥಾನದಿಂದ ಹೊರಟರು. ಈ ಘಟನೆಯಾದ ೬-೭ ದಿನಗಳಲ್ಲಿಯೇ ಆ ವೃದ್ಧರು ಅಚಾನಕ್ಕಾಗಿ ಪ್ರಾಣಬಿಟ್ಟರು. ಮರಣಕಾಲದಲ್ಲಿ ಸಾಕ್ಷಾತ್ ಅಮ್ಮನವರ ದರ್ಶನ ಮಾಡಿದ ಮಹಾಪುಣ್ಯ ಅವರದಾಗಿತ್ತು.

ತಾಯಿಗೆ ಮಕ್ಕಳಲ್ಲಿ ಬೇಧಭಾವವಿರುವುದಿಲ್ಲ, ಎಲ್ಲರನ್ನೂ ಸಮಾನವಾಗಿ ಕಾಣುತ್ತಾಳೆ. ಅವಳನ್ನು ಕಾಣಲು ಶುದ್ದ ಮನಸ್ಸು ಧೃಢಭಕ್ತಿ ಇದ್ದರೆ ಸಾಕು. ಅಮ್ಮಾ ಎಂದು ಅಂತಃಕರಣಪೂರ್ವಕವಾಗಿ ಕೂಗಿ ಕರೆದರೆ ಅವಳು ಬಾರದೇ ಇರಳು. ಬಂದ ಅವಳನ್ನು ಗುರುತಿಸುವ ಸಾಮರ್ಥ್ಯ ನಮಗಿರಬೇಕಷ್ಟೇ.

ಅಂಬಾ ದಿವ್ಯಚರಣಾರವಿಂದಾರ್ಪಣಮಸ್ತು

ಅಂಬಾಸುತ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!