Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಇತರೆ / Others

ದುರ್ಗಾಪರಮೇಶ್ವರಿಯ (ಉಡಸಲಮ್ಮನ) ಅನುಗ್ರಹ ಕಥನ 7

Published

on

ಹಾಸನ ಜಿಲ್ಲೆಯ ಹರಿಹರಪುರ ದುರ್ಗಾಪರಮೇಶ್ವರಿಯ (ಉಡಸಲಮ್ಮನ) ಅನುಗ್ರಹ ಕಥನ 7

ಗ್ರಾಮದೇವತೆಯ ರೂಪದಲ್ಲಿನ ಜಗನ್ಮಾತೆಯೇ ತಮ್ಮ ಸರ್ವಸ್ವವೆಂದು ನಂಬಿದ ಸಾತ್ವಿಕ ಕುಟುಂಬವದು. ಆ ಮನೆಯ ಪ್ರತಿಯೊಂದು ಘಟನೆಯಲ್ಲೂ ಆ ತಾಯಿಯನ್ನೇ ಕಾಣುತಿದ್ದಂತಹ ಈಗಲೂ ಹಾಗೆಯೇ ಕಾಣುತ್ತಿರುವ ಕುಟುಂಬ. ವಿಶೇಷವಾಗಿ ದೇವಿ ಆರಾಧನೆಗೆ ಅವಶ್ಯವಾಗಿರುವ ಮಡಿ ಮೈಲಿಗೆ ( ದೈಹಿಕ ಹಾಗು ಮಾನಸಿಕ) ಗಳನ್ನು ಕಟ್ಟುನಿಟ್ಟಾಗಿ ಆಚರಿಸುತಿದ್ದವರು.

ಅವರ ಮನೆಯಲ್ಲೊಂದು ಅಮ್ಮನವರ ಮುಖಭಾವವಿದ್ದಿತ್ತು. ಒಂದು ದಿನ ಆ ಮನೆಯ ಹಿರಿಯ ಹೆಣ್ಣುಮಗಳು ದೇವರ ಕೋಣೆಯನ್ನು ಸ್ವಚ್ಚಗೊಳಿಸಿ ಅಮ್ಮನವರ ಮುಖಭಾವ ಸೇರಿದಂತೆ ಎಲ್ಲಾ ದೇವರ ವಿಗ್ರಹಗಳನ್ನು ತೊಳೆದು ಶುಚಿಗೊಳಿಸಿ ನಂತರ ಹೂವಿಟ್ಟು ಮನೆಯ ಹಿರಿಯರಿಗೆ ಪೂಜೆಗೆ ಅಣಿ ಮಾಡಿಕೊಟ್ಟಿದ್ದರು. ಅಂದಿನ ಪೂಜೆಯೂ ಸಾಂಗವಾಗಿ ನೆಡೆದಿತ್ತು. ಇದು ಸರಿ ಸುಮಾರು ೫೦-೬೦ ವರ್ಷಗಳ ಹಿಂದೆ ನೆಡೆದ ಘಟನೆ ಆಗ ವಿದ್ಯುತ್ ದೀಪಗಳ ವ್ಯವಸ್ಥೆ ಇರಲಿಲ್ಲ. ಅಂದು ರಾತ್ರಿ ಆ ಮನೆಯ ಯಜಮಾನನ ಸ್ವಪ್ನದಲ್ಲಿ ಕುಮಾರಿ ರೂಪದಲ್ಲಿ ಕಾಣಿಸಿಕೊಂಡ ಅಮ್ಮನವರು,”ನೀನು ಸರಿಯಾಗಿ ನನ್ನ ಮುಖವನ್ನು ನೋಡಿದ್ದೀಯಾ?, ನಾನು ಮುಂಜಾನೆಯಿಂದ ಬೋಳು ಮೂಗಿನಲ್ಲಿದ್ದೇನೆ” ಎಂದು ಸೂಚಿಸಿದರು. ತಕ್ಷಣ ಎಚ್ಚರಗೊಂಡ ಆ ಯಜಮಾನರು ಕೈಕಾಲು ತೊಳೆದು ದೇವರ ಮನೆಗೆ ಹೋಗಿ ಮಂದವಾಗಿದ್ದ ದೀಪಗಳನ್ನು ಪ್ರಜ್ವಲಗೊಳಿಸಿ ನೋಡಿದಾಗ ಅಮ್ಮನವರ ಬೆಳ್ಳಿಯ ಮುಖಭಾವದಲ್ಲಿ ಮೂಗುತಿಯು ಇರಲಿಲ್ಲ. ತಕ್ಷಣ ಗಾಬರಿಗೊಂಡ ಅವರು, ದೇವರ ಮನೆಯನ್ನು ಶುಚಿಗೊಳಿಸಿದ ತಮ್ಮ ಮಗಳನ್ನು ಎಬ್ಬಿಸಿ ನೆಡೆದ ಸಂಗತಿಯನ್ನು ತಿಳಿಸಿ ನಿರ್ಮಾಲ್ಯದ ಹೂಗಳನ್ನು ಹಾಕಿದ ಜಾಗದಲ್ಲಿ ಸರಿಯಾಗಿ ಮೂಗುತಿಯನ್ನು ಹುಡುಕಲು ತಿಳಿಸುತ್ತಾರೆ. ಹಾಗೆಯೇ ಹುಡುಕಿದ ಆಕೆಗೆ ಮೂಗುತಿಯೂ ಸಿಗುತ್ತದೆ. ನಂತರ ಅದನ್ನು ತೊಳೆದು ದೇವರ ಮುಂದಿಟ್ಟು ಅಚಾತುರ್ಯವನ್ನು ಕ್ಷಮಿಸೆಂದು ಅಮ್ಮನವರಲ್ಲಿ ಬೇಡಿಕೊಳ್ಳುತ್ತಾರೆ.

ಯದ್ಭಾವಂ ತದ್ಭತಿ ಎಂಬಂತೆ ನಾವು ಆ ಜಗನ್ಮಾತೆಯನ್ನು ಹೇಗೆ ಕಾಣುತ್ತೇವೆಯೋ ಆಕೆಯೂ ನಮಗೆ ಅದೇ ರೂಪದಿಂದ ಸಲಹುತ್ತಾಳೆ. ಈ ಘಟನೆಯಲ್ಲಿ ಅಲ್ಲಿನ ಒಂದು ಮೂಗುತಿಯ ವಿಚಾರ ಅಮ್ಮನವರಿಗೆ ದೊಡ್ಡದಾಗಿರಲಿಲ್ಲ. ಆದರೆ ಆ ಜನರ ಭಕ್ತಿಗೆ ಈ ರೀತಿಯಲ್ಲಿ ಅಮ್ಮನವರು ಸಾಕ್ಷಿಸ್ವರೂಪವಾಗಿ ನಿಂತಿದ್ದರು. ಇನ್ನೊಂದು ವಿಚಾರ ಹೆಮ್ಮೆಯಿಂದ ಹೇಳಬೇಕೆಂದರೆ ಈ ಘಟನೆಯಲ್ಲಿ ಹೇಳಿದ ದೇವರಕೋಣೆ ಶುಚಿಗೊಳಿಸಿದ ಹೆಣ್ಣುಮಗಳು ನಮ್ಮ ಅಜ್ಜಿಯವರು. ಪರಮ ಸಾತ್ವಿಕರು, ಅಮ್ಮನವರೇ ಸರ್ವಸ್ವ ಎಂದು ನಂಬಿದವರು. ಅವರ ಹೆಸರು ಶ್ರೀಮತಿ ಕಮಲಮ್ಮ ರಾಮಸ್ವಾಮಿ. ನಮ್ಮಲ್ಲೇನಾದೂ ಈಗ ಅಲ್ಪಸ್ವಲ್ಪ ಭಕ್ತಿ ಎಂಬುದಿದೆ ಎಂಬುದಾದರೆ ಅದು ಆಕೆಯ ಸಾತ್ವಿಕ ಸಾಧನೆಯ ಫಲ ಅಷ್ಟೇ.

ಅಂಬಾ ದಿವ್ಯಚರಣಾರವಿಂದಾರ್ಪಣಮಸ್ತು

ಅಂಬಾಸುತ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!