Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಇತರೆ / Others

ಶನಿಕಾಟದಿಂದ ಪಾರಾಗಲು ಈ ಸರಳ ಉಪಾಯವನ್ನು ಅನುಸರಿಸಿ

Published

on

“ಕಾಳೀ” ದೇವಿಯನ್ನು ಪೂಜೆ ಮಾಡುವವರಿಗೆ , ಕಾಳೀ ದೇವಿಯ ಭಕ್ತರಿಗೆ “ಶನಿಮಹಾತ್ಮನು” ತೊಂದರೆ ಕೊಡುವುದಿಲ್ಲ.. ಏಕೆ..?

ಒಂದು ಬಾರಿ ತಾಯಿ “ಛಾಯಾದೇವಿ” ಯನ್ನು ಕಾಣಲು “ಶನಿದೇವರು” ಸದನಕ್ಕೆ ಆಗಮಿಸಿದಾಗ , ತಾಯಿಯು ಜಗನ್ಮಾತೆಯಾದ “ಮಹಾಕಾಳಿ”ಯನ್ನು ಪೂಜಿಸುತ್ತಿರುತ್ತಾರೆ..
ಅದನ್ನು ಕಂಡ ” ಶನಿಮಹಾದೇವನು” , ಅಮ್ಮಾ, ನೀವು ಪೂಜಿಸುವ ದೇವತೆ ಯಾರು..? ಅವರ ಹೆಸರೇನು..? ಎಂದು ಪ್ರಶ್ನಿಸುತ್ತಾರೆ..

ಪುತ್ರಾ, ಇವಳ ಹೆಸರು “ಮಹಾಕಾಳಿ” . ಶಿವನ ಪತ್ನಿಯಾದ ಪಾರ್ವತಿಯ ಅಂಶದವಳು. ಯಾವುದೇ ಕಷ್ಟ, ತೊಂದರೆ ಅಡ್ಡಿ, ಆತಂಕಗಳಿಗೇ ಕಂಟಕಪ್ರಾಯಳು.
ನಿನ್ನ ಕ್ಷೇಮಕ್ಕಾಗಿ ನಿತ್ಯವೂ ಈ ದೇವತೆಯನ್ನು ಪೂಜಿಸುತ್ತಿದ್ದೇನೆ..
ಅಲ್ಲದೇ ನನ್ನ ಬಣ್ಣವೂ “ಕಪ್ಪು” , ನಿನ್ನ ಬಣ್ಣವೂ “ಕಪ್ಪು” , ಮಹಾಕಾಳಿಯೂ ಹಾಗೇ “ಕಪ್ಪು” ಬಣ್ಣದವಳಾದ್ದರಿಂದ ನನಗೆ ಆ ದೇವಿಯ ಮೇಲೆ ಹೆಚ್ಚು ಪ್ರೀತಿ, ನಂಬಿಕೆ, ಭಕ್ತಿ ಇದೆ ಎಂದು ಹೇಳುತ್ತಾಳೆ..

ಇದನ್ನು ಕೇಳಿ ಸುಪ್ರೀತನಾದ “ಶನಿಮಹಾದೇವನು” ಅಮ್ಮಾ ನಾನು ನಿನಗೆ ಇಷ್ಟವಾದಂತ ಯಾವ ಕೆಲಸ ಮಾಡಲಿ..? ಎಂದಾಗ
ಮಗೂ, ನನ್ನ ಆರಾಧ್ಯದೇವತೆಯಾದ “ಮಹಾಕಾಳಿ” ಯನ್ನು ಯಾರು ಆರಾಧಿಸುತ್ತಾರೋ, ಪೂಜಿಸುತ್ತಾರೋ, ಸ್ತುತಿಸುತ್ತಾರೋ ಅವರನ್ನು ನೀನು ಕಾಡಬೇಡ, ಅವರಿಗೆ ಸನ್ಮಂಗಳವನ್ನು ಕೊಡು , ಇದು ನೀನು ನನಗೆ ಕೊಡುವ “ವರ” ಎಂದು ಹೇಳುತ್ತಾಳೆ..
ಆಗ “ಶನಿದೇವನು” ಹಾಗೇ ಆಗಲಿ ತಾಯಿ, ಎಂದು “ವರವನ್ನು” ಕೊಡುತ್ತಾರೆ..!

ಇದೇ ಕಾರಣಕ್ಕೆ ಯಾರು ಕಾಳಿದೇವರನ್ನು ಪೂಜಿಸುವವರಿಗೆ “ಶನಿದೇವರು” ಕಾಟ ಇರುವುದಿಲ್ಲ..!

ಶುಭವಾಗಲಿ..

ಗಿರೀಶ್ ಶರ್ಮ,
ಖ್ಯಾತ ಜ್ಯೋತಿಷಿಗಳು ಹಾಗು ವಾಸ್ತು ತಜ್ಞರು
ಹಾಲನೂರು ,
ತುಮಕೂರು

girish1989sharma@gmail.com

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!