Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಅವಧೂತ ಮಹಿಮೆ / Avadhūta Mahime

ವರದಪುರ ಶ್ರೀಧರಸ್ವಾಮಿಗಳ ಧ್ಯಾನಶ್ಲೋಕ ಅರ್ಥಸಹಿತ

Published

on

ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣೇ|
ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ||

ನಮಃ ಎಂದರೆ ನಮಸ್ಕಾರ ಅರ್ಥಾತ್ ತನ್ನನ್ನು ತಾನು ಪರಮಾತ್ಮನಿಗೆ ಸಮರ್ಪಿಸಿ ಕೊಳ್ಳುವುದು. “ಶಾಂತಾಯ ದಿವ್ಯಾಯ” ತನ್ನಷ್ಟಕ್ಕೆ ತಾನೇ ಪ್ರಕಾಶಿಸುತ್ತಿರುವ, ಅರಿವಿನ ರೂಪದಿಂದ ಯುಕ್ತನಾಗಿ ರಾಗದ್ವೇಷ ರಹಿತನಾದ ಚಿದಾನಂದ ರೂಪನಿಗೆ ನಮಸ್ಕಾರ.
“ಸತ್ಯ ಧರ್ಮಸ್ವರೂಪಿಣೇ ಸ್ವಾನಂದಾಮೃತ ತೃಪ್ತಾಯ” ಸತ್ಯ ಮತ್ತು ಧರ್ಮಗಳು ಪರಸ್ಪರ ಪೂರಕವಾದದು; ಒಂದನ್ನು ಬಿಟ್ಟು ಇನ್ನೊಂದಿಲ್ಲ . ಸತ್ಯಕ್ಕೆ ಆಧಾರ ಧರ್ಮ. ಧರ್ಮವೆಂದರೆ ನಾವು ಬದುಕಲು ಬೇಕಾದ ರೀತಿ ನೀತಿಗಳನ್ನು ಅನುಸರಿಸುವುದು. ಬೇರೆಯವರಿಗೆ ತೊಂದರೆ ಕೊಡದೇ ನಾವು ಬದುಕುವುದು ಮತ್ತು ಬೇರೆಯವರಿಗೂ ಬದುಕಲು ಬಿಡುವುದು ಎನ್ನ ಬಹುದು.
ಇಂತಹ ಸತ್ಯ ಮತ್ತು ಧರ್ಮಗಳ ಸ್ವರೂಪಿಯಾದ ಸದ್ಗುರುವಿಗೆ, ಸಚ್ಚಿದಾನಂದ ರೂಪನು, ಜನನ ಮರಣಗಳನ್ನ ಜಯಿಸಿ ಅಮೃತ ರೂಪನಾಗಿರುವನೋ ಮತ್ತು ಅದರಿಂದ ತೃಪ್ತನಾಗಿರುವನೋ ಅಂತಹ ಶ್ರೀಧರಾಯ ನಮಃ .
ತಾನು ಮೋಕ್ಷವೆಂಬ ಸಂಪತ್ತನ್ನು ಧರಸಿ, ಬೇರೆಯವರಿಗೂ ಮೋಕ್ಷವನ್ನ ಕರಣಿಸುವಲ್ಲಿ ಸಮರ್ಥನೋ ಅಂತಹ ಸದ್ಗುರು ಶ್ರೀಧರರಿಗೆ ಪುನಃ ಪುನಃ ನಮಸ್ಕರಿಸುತ್ತೇನೆ.👣🙏🏼

ಈ ಗುರುಮಂತ್ರವನ್ನ ಶುದ್ಧಾಂತಃಕರಣದಿಂದ ಜಪಿಸಿದರೆ ಗುರುಕೃಪೆಯಾಗುವುದರಲ್ಲಿ ಸಂದೇಹವಿಲ್ಲ…

ಕಾರ್ತೀಕ್‌ ಭಟ್,ಶಿವಮೊಗ್ಗ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!