Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಶೃಂಗೇರಿಯಲ್ಲಿ ಗುರುಸಾರ್ವಭೌಮರ 68ನೆಯ ವರ್ಧಂತಿ ವೈಭವ

Published

on

ಜಗತ್ತಿನಲ್ಲಿ ಸನಾತನ ಧರ್ಮಾಚರಣೆಗೆ ಅನುಕೂಲವಾಗಿರುವ ಭರತಖಂಡದ ಸಹ್ಯಾದ್ರಿ ಪಂಕ್ತಿಯಲ್ಲಿ ವಿಭಾಂಡಕ, ಋಷ್ಯಶೃಂಗ ಮಹರ್ಷಿಗಳ ತಪೋಭೂಮಿಯಲ್ಲಿ ಜಗದ್ಗುರು ಆದಿ ಶಂಕರಾಚಾರ್ಯರಿಂದ ಸ್ಥಾಪಿತವಾದ ಪ್ರಥಮ ಹಾಗೂ ಪ್ರಮುಖವೂ ಆದ ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠದಲ್ಲಿ 36 ನೆಯ ಅಧಿಪತಿಗಳಾಗಿ ವಿರಾಜಮಾನರಾಗಿರುವವರು ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು.

ಲಕ್ಷಾಂತರ ಭಕ್ತರ,ಮುಮುಕ್ಷುಗಳ ಆಧ್ಯಾತ್ಮಿಕ ಮುನ್ನಡೆಯಲ್ಲಿ ಮಹಾಸ್ವಾಮಿಗಳು ಪ್ರಧಾನ ಪಾತ್ರವಹಿಸುತ್ತಿದ್ದಾರೆ.ಯತಿಶ್ರೇಷ್ಠರು ಭಕ್ತಸುಲಭರಷ್ಟೇ ಅಲ್ಲ ಅನುಸರಿಸಬೇಕಾದ ಆದರ್ಶವೂ, ಆಧ್ಯಾತ್ಮಿಕೊನ್ನತಿಯ ಜ್ವಲಂತ ನಿದರ್ಶನವಾಗಿದ್ದಾರೆ.

ಪ್ರೀತಿ ಕರುಣೆಗಳ ಮೂರ್ತ ಸ್ವರೂಪವಾಗಿರುವ ಶ್ರೀ ಶ್ರೀ ಗಳವರ ದರ್ಶನ ಪಡೆಯುವುದು ಮಾನಸಿಕವಾಗಿ ಆಧ್ಯಾತ್ಮಿಕವಾಗಿ ಪುನಶ್ಚೇತನ ಹೊಂದುವುದೂ, ಅನಿರತಸಾಧಾರಣವಾದ ಆನಂದಾನುಭೂತಿಯು ಆಗಿದೆ ಎಂಬುದು ಪ್ರತಿಯೊಬ್ಬ ಭಕ್ತನ ಅನುಭವವಾಗಿದೆ.

ಜಗದ್ಗುರು ಸಾರ್ವಭೌಮ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ 68 ನೆಯ ವರ್ಧಂತಿ ಮಹೋತ್ಸವ ಸುಸಂದರ್ಭದಲ್ಲಿ

ಭಾಭಿಸ್ಸದಾಧಿಕ್ಕೃತಭಾನುಮಂಡಲಾನ್ ರಮ್ಯೋಕ್ತಿನಿಃಸಾರಿತಚಂದ್ರಜಾಮೃತಾನ್ |
ತೀರ್ಥಾಂಘ್ರಿಸಂಪಾವಿತಶೃಂಗಭೂಧರಾನ್ ಶ್ರೀಭಾರತೀತೀರ್ಥಗುರೂನ್ಸಮಾಶ್ರಯೇ ||

ತಮ್ಮ ಕಾಂತಿಯಿಂದ ಯಾವಾಗಲೂ ಸೂರ್ಯಮಂಡಲವನ್ನು ತಿರಸ್ಕರಿಸಿರುವ,ತಮ್ಮ ಮನೋಹರವಾದ ಉಪದೇಶಗಳಿಂದ ಚಂದ್ರನ ಅಮೃತಕಿರಣಗಳನ್ನು ಸಾರರಹಿತವಾಗಿ ಮಾಡಿರುವ,ತಮ್ಮ ತೀರ್ಥಪಾದಗಳಿಂದ ಶೃಂಗಗಿರಿಯನ್ನು ಅತ್ಯಂತ ಪಾವನಗೊಳಿಸಿರುವ ಶ್ರೀ ಭಾರತೀತೀರ್ಥ ಗುರುಗಳನ್ನು ಆಶ್ರಯಿಸುತ್ತೇನೆ.

ಇಂತಿ ಸಜ್ಜನ ವಿಧೇಯ

ವಿಶ್ವಾಸ್.ಎಸ್.ಭಟ್, ಶೃಂಗೇರಿ.
ಪ್ರಧಾನ ಸಂಪಾದಕರು ಜ್ಞಾನದಾ
(ಜ್ಞಾನದಾ ಆಧ್ಯಾತ್ಮಿಕ ಬಳಗದ ಪರವಾಗಿ)

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!