Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಶೃಂಗೇರಿ ಗುರುಮಹಿಮೆ 07

Published

on

 

ಶ್ರೀ ಶಾರದಾಲಯದಲ್ಲಿ ಒಬ್ಬ ಬಾಲಕನೊಬ್ಬ ಭಕ್ತಿಯಿಂದ ಶ್ರೀ ಲಲಿತಾ ಸಹಸ್ರನಾಮ ಹೇಳಿಕೊಂಡು ಪ್ರದಕ್ಷಿಣೆ ಮಾಡುತ್ತಿದ್ದ.ಇದನ್ನು ಗಮನಿಸಿದ ಹಿರಿಯರೊಬ್ಬರು ಅವನನ್ನು ಗದರಿಸಿ “ಇನ್ನೂ ಉಪನಯನವಾಗಿಲ್ಲ‌.ನೀನು ಲಲಿತಾಸಹ್ರನಾಮವನ್ನು ಹೇಳುತ್ತಿಯಾ?ಮಂತ್ರೋಪದೇಶವಿಲ್ಲದೆ ಹಾಗೆಲ್ಲ ಹೇಳಿದರೆ ಪಾಪಪ್ರಾಪ್ತಿ ಎಂದು ಹೆದರಿಸಿದರು.8-9 ವರ್ಷದ ಬಾಲಕನಿಗೆ ಅಳುವೇ ಬಂದುಬಿಟ್ಟಿತ್ತು.

ಆ ವೇಳೆಗೆ ಗುರುದೇವರು ಅಲ್ಲಿಗೆ ದಯಮಾಡಿಸಿದರು.ಹಿರಿಯರನ್ನು ” ಇವನಾರು?ಏಕೆ ಅಳುತ್ತಿದ್ದಾನೆ? ಎಂದು ಪ್ರಶ್ನಿಸಿದರು.ಪಂಡಿತರು ವಿವರವಾಗಿ ಎಲ್ಲವನ್ನೂ ಬಿನ್ನವಿಸಿದರು.”ಪಂಡಿತರೆ,ದೇವತೆಗಳು ಸ್ತೋತ್ರ ಪ್ರಿಯರಲ್ಲವೇ? ಈ ಶುದ್ಧ ಮನಸ್ಸಿನ ಬಾಲಕ ನಿಷ್ಕಾಪಟ್ಯದಿಂದ ಶ್ಲೋಕ ಹೇಳಿದರೆ ದೇವಿಗೆ ಮೆಚ್ಚಿಗೆಯಾಗುವುದಿಲ್ಲವೇ ?ಅದರಲ್ಲಿ ತಪ್ಪೇನಿದೆ ? ಯಾವುದಾದರೂ ಕಾಮನೆಯಿಂದ ಸ್ತೋತ್ರಾದಿಗಳು ಹೇಳಬೇಕಾದಲ್ಲಿ ಅದಕ್ಕೆ ವಿಧಿನಿಷೇಧಗಳುಂಟು.ಆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.ಈ ಬಾಲಕ ಅಮ್ಮನವರ ಪ್ರೀತ್ಯರ್ಥವಾಗಿ ಸ್ತೋತ್ರ ಹೇಳಿದರೆ ತಪ್ಪಾಗಲಾರದು‌ ಎಂದು ನುಡಿದು ಬಾಲಕನಿಗೆ “ನೀನು ಸ್ತೋತ್ರವನ್ನು ಹೇಳಪ್ಪಾ,ಮಗು ನಿಮ್ಮ ತಂದೆಗೆ ಹೇಳಿ ಬೇಗನೆ ಉಪನಯನ ಮಾಡಿಸಿಕೊ ” ಎಂದರು.ದೇವತೆಗಳು ಸ್ತೋತ್ರ ಪ್ರಿಯರಷ್ಟೇ ? ಅವರನ್ನು ನಿಷ್ಕಾಮನೆಯಿಂದ ಸ್ತುತಿಸುವುದರಲ್ಲಿ ದೋಷವಿಲ್ಲವಷ್ಟೇ ?

ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರ ದಿವ್ಯ ಚರಿತ್ರೆಯಿಂದ ಆಯ್ದ ಕಥೆಯೊಂದಿಗೆ ಗುರುಗಳ ಪಾದಕಮಲದ ಸ್ಮರಣೆಗೈಯುತ್ತಾ..

ಇಂತಿ ಸಜ್ಜನ ವಿಧೇಯ
ವಿಶ್ವಾಸ್.ಎಸ್.ಭಟ್,ಶೃಂಗೇರಿ.
ಪ್ರಧಾನ ಸಂಪಾದಕರು “ಜ್ಞಾನದಾ”

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!