Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಸನಾತನ ಭಾರತ / Sanathana Bharatha

ಶ್ರೀ ದುರ್ಗಾಪರಮೇಶ್ವರಿಯ(ಉಡಸಲಮ್ಮನ) ಅನುಗ್ರಹ ಕಥನ ಭಾಗ 8

Published

on

 

ಶ್ರೀಮಾತೇ ಶ್ರಿತಜನ ಪೋಷಿತೆ ಶ್ರೀಲಲಿತೇ

ಆಕೆ ಶಕ್ತಿ ದೇವತೆ. ಭಕ್ತೋಧ್ದಾರಕ್ಕಾಗಿ, ಭಕ್ತರಲ್ಲಿ ಭಾವುಕ ಭಕ್ತಿ ಹೆಚ್ಚಿಸುವುದಕ್ಕಾಗಿ ಲೀಲಾ ವಿನೋದಗಳನ್ನು ತೋರಿಸಿ ಭಕ್ತರ ಮನದಲ್ಲಿ ಸ್ಥಿರವಾಗಿ ತಾನು ನಿಲ್ಲುತ್ತಾಳೆ. ಆಕೆಗೆ ಕಳೆದುಕೊಳ್ಳಲು ಹಾಗು ಪಡೆದುಕೊಳ್ಳಲು ಏನೂ ಇಲ್ಲ. ಎಲ್ಲಾ ತನ್ನ ಮಕ್ಕಳಿಗಾಗಿ ಹಾಗು ಮಕ್ಕಳಿಗೋಸ್ಕರ ಅಷ್ಟೇ. ನಾವು ಹರಕೆಯ ಮೂಲಕ ಸಲ್ಲಿಸುವ ವಸ್ತ್ರ ಒಡವೆಗಳಿಂದ ಆಕೆಗೇನೂ ಆಗಬೇಕಾದ್ದಿಲ್ಲ. ನಮ್ಮ ತೃಪ್ತಿಗೋಸ್ಕರ ಇವೆಲ್ಲಾ. ಈ ಪ್ರಸಂಗದಲ್ಲೂ ಅಷ್ಟೇ ಮಕ್ಕಳಿಗೆ ಸೂಕ್ಷ್ಮತೆಯನ್ನು ಕಲಿಸಲು ಅಮ್ಮನವರೊಂದು ಆಟ ಹೂಡಿದ್ದರು.

ಹಿಂದೆಯೇ ಹೇಳಿದಂತೆ ಅದು ಏಳು ಹಳ್ಳಿಯ ಗ್ರಾಮದೇವತೆಯ ದೇವಸ್ಥಾನ. ವಾರದಲ್ಲಿ ಒಂದು ದಿನ ಅಂದರೆ ಶುಕ್ರವಾರ ಮಾತ್ರ ಪೂಜೆ ನೆಡೆಯುತಿತ್ತು. ( ಇತ್ತೀಚೆಗೆ ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಅಧಿಪತಿಗಳಾದ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರಿಂದ ಪುನಃಪ್ರತಿಷ್ಠಾಪನಾ ಕುಂಭಾಭಿಷೇಕವಾದ ನಂತರ ಅವರ ಆದೇಶದಂತೆ ನಿತ್ಯ ಪೂಜೆ ನೆಡೆಯುತ್ತಿದೆ.)ಅಂದು ಶುಕ್ರವಾರ ಬೆಳಗಿನ ಜಾವ ಸರಿಸುಮಾರು ೩ ಘಂಟೆ ಇದ್ದಿರಬಹುದು. ಆ ಗ್ರಾಮದ ಬ್ರಾಹ್ಮಣ ಹಿರಿಯರೊಬ್ಬರ ಸ್ವಪ್ನದಲ್ಲಿ ಕಾಣಿಸಿಕೊಂಡ ಅಮ್ಮನವರು ,” ನನ್ನ ಗುಡಿಗೆ ಮೂವರು ಕಳ್ಳರು ಕಳ್ಳತನ ಮಾಡಲು ಬಾಗಿಲು ಒಡೆದು ನುಗ್ಗಿದ್ದಾರೆ, ಹೋಗಿ ಅವರನ್ನು ಹಿಡಿ”ಎಂದು ಹೇಳಿದಂತಾಯಿತು. ಆದರೆ ಅತೀವ ನಿದ್ರೆಯ ಮಂಪರಿನಲ್ಲಿದ್ದ ಆ ವೃದ್ದರಿಗೆ ಆ ಸ್ವಪ್ನ ತಕ್ಷಣಕ್ಕೆ ಮರೆತುಹೋಗಿದೆ. ಬೆಳಗ್ಗೆ ಎಚ್ಚರಗೊಂಡ ನಂತರ ಸ್ವಪ್ನದ ವಿಚಾರ ಜ್ಞಾಪಕವಾಗಿ ಸ್ವಲ್ಪ ಗಾಬರಿಯಿಂದಲೇ ಮನೆಯಿಂದ ಹೊರಬರುತ್ತಿರಲು, ಓರ್ವ ರೈತ ಓಡಿ ಬಂದು, ” ಅವ್ವನ ಗುಡಿ ಬಾಗುಲ್ನ ಯಾರೋ ಒಡ್ದೌರಂತೆ, ಪಟೇಲ್ರು ಹೇಳುದ್ರು ಬಿರ್ನೇ ಬರ್ಬೇಕಂತೆ ಐನೋರೇ” ಎನ್ನುತ್ತಾನೆ.

ತಕ್ಷಣ ದೇವಸ್ಥಾನಕ್ಕೆ ಹೋಗಿ ನೋಡಿದರೆ, ಅಲ್ಲ ಬಾಗಿಲನ್ನು ಹಾರೆಯಿಂದ ಮೀಟಿ ಒಡೆಯಲಾಗಿತ್ತು, ಹಾಗು ಗರ್ಭಗುಡಿಗೂ ನುಗ್ಗಿ ಅಮ್ಮನವರ ಉದ್ಭವ ಮೂರ್ತಿಯನ್ನು ಕೀಳಲೂ ಯತ್ನಿಸಲಾಗಿತ್ತು, ಆದರೆ ವಿಗ್ರಹಕ್ಕೆ ಏನೂ ಆಗಿರಲಿಲ್ಲ, ಬಂದಿದ್ದ ಕಳ್ಳರು ಕಳ್ಳತನ ಮಾಡಲು ಉಪಯೋಗಿಸಿದ ಹಾರೆ ಮುಂತಾದ ಪರಿಕರಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದು ಏನನ್ನೋ ನೋಡಿ ಹೆದರಿ ಹೋಗಿರಬಹುದು ಎನಿಸುವಂತಿತ್ತು. ಯಾವ ವಸ್ತುವೂ ಕಳ್ಳತನವಾಗಿರಲಿಲ್ಲ. ಪ್ರಭಾವಳಿ ಮಾತ್ರ ಸ್ವಲ್ಪ ಭಿನ್ನವಾಗಿದ್ದಿತ್ತು. ನಿಟ್ಟುಸಿರು ಬಿಟ್ಟು ಹೊರ ಬಂದು ಕೂತ ತಕ್ಷಣ ಪಟೇಲರು , “ನನಗೆ ರಾತ್ರಿ ಅವ್ವ ಕನ್ಸಲ್ಲಿ ಬಂದು ಗುಡಿಗೆ ಈಗ್ಲೇ ಹೋಗು ಅಂದಂಗಾಯ್ತು, ನಾ ಕನ್ಸು ಅಂಕೊಂಡ್ ಮಲಗಿಬಿಟ್ಟೆ”.ಎಂದರು. ಮತ್ತೊಬ್ಬ ಊರ ಪ್ರಮುಖರೂ ಅದನ್ನೇ ಹೇಳಿದರು. ಆಗ ಆ ವಯೋವೃದ್ದ ಬ್ರಾಹ್ಮಣರೂ ತಮಗಾದ ಸ್ವಪ್ನ ದೃಷ್ಟಾಂತದ ಬಗ್ಗೆ ತಿಳಿಸಿ, ” ಆಕೆ ನಮಗೆಲ್ಲಾ ಸೂಕ್ಷ್ಮವಾಗಿ ತಿಳಿಸಿದರೂ ನಾವ್ಯಾರೂ ಎಚ್ಚೆತ್ತುಕೊಳ್ಳಲಿಲ್ಲವಲ್ಲಾ”ಎಂದು ಬೇಸರ ಮಾಡಿಕೊಂಡು, ತಾಯಿಯ ಮಹಿಮೆಯನ್ನು ನೆನೆದು, ಭಿನ್ನಗೊಂಡಿದ್ದ ಪ್ರಭಾವಳಿಯ ಕೆಲಸ ಹಾಗು ದೇವಾಲಯದ ಕೆಲಸದ ಬಗ್ಗೆ ಚರ್ಚಿಸಿದರು.

ತನ್ನನ್ನು ತಾನು ರಕ್ಷಿಸಿಕೊಳ್ಳದವಳು ದೇವತೆಯಾ ಎಂಬುದು ಹಲವರ ವಾದವಾಗಿರಬಹುದು. ಆದರೆ ಇದು ವಾದಕ್ಕೆ ಬೇಕಾಗುವ ವಿಷಯವಲ್ಲ, ನಮ್ಮೊಳಗಿರುವ ಸೂಕ್ಷ್ಮತೆಯ ಅರಿವನ್ನು ನಮಗೆ ನೀಡಲು, ತಾಯಿ ಆಡಿರುವ ಆಟವಷ್ಟೇ ಇದು, ಯಾರಿಗೆ ಗೊತ್ತು, ನಿಜವಾಗಿಯೂ ಕಳ್ಳರು ಬಂದಿದ್ದರೋ ಅಥವ ಇದು ಆ ಸರ್ವಮಂಗಳೆಯ ಲೀಲಾವಿನೋದವೋ?

ನಿನ್ನ ಅರಿತವರ್ಯಾರೇ ತಾಯೇ
ಮೂಜಗವ ಕಾಯೋ ಕರುಣಾಮಯಿಯೇ ||

ಅಂಬಾ ದಿವ್ಯಚರಣಾರವಿಂದಾರ್ಪಣಮಸ್ತು

– ಶ್ರೀಕಾಂತ್, ಹರಿಹರಪುರ

ಶ್ರೀದುರ್ಗಾದೇವಸ್ಥಾನ(ಉಡಸಲಮ್ಮ)
ಹರಿಹರಪುರ,ಹಾಸನ ಜಿಲ್ಲೆ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!