Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಅವಧೂತ ಮಹಿಮೆ / Avadhūta Mahime

ಶ್ರೀ ಗುರುಚರಿತ್ರೆ ಅನುಗ್ರಹ ಕಥನ ಮಾಲಿಕೆ-೫

Published

on

 

ಕುರುವಪುರದಲ್ಲಿ ರವಿದಾಸನಂಬ ವೃದ್ಧ ಮಡಿವಾಳನೊಬ್ಬನು ಪ್ರಾಪಂಚಿಕ ಚಿಂತೆಯನ್ನು ಮರೆತು ಮುಂಜಾನೆ,ಸಂಜೆ ಮಠವನ್ನು ಸ್ವಚ್ಛಗೊಳಿಸುವ ಹಾಗೂ ತನ್ನ ದೋಣಿಯಲ್ಲಿ ಕೃಷ್ಣಾನದಿಯಲ್ಲಿ ಭಕ್ತರನ್ನು ನದಿದಾಟಿಸುವುದನ್ನೇ ಗುರುಸೇವೆಯೆಂದು ತಿಳಿದು ಶ್ರದ್ಧಾ-ಭಕ್ತಿಯಿಂದ ಮಾಡುತ್ತಿದ್ದನು.
ಒಮ್ಮೆ ಆ ಪ್ರದೇಶದ ಯುವರಾಜ ತನ್ನ ಪರಿವಾರದೊಂದಿಗೆ ಕೃಷ್ಣಾನದಿಗೆ ವಿಹಾರಾರ್ಥವಾಗಿ ಬಂದು ಹೆಂಗೆಳೆಯರೊಡನೆ ವಿಹರಿಸುತ್ತಿರಲು ದಡದಲ್ಲಿ ನಿಂತು ವೀಕ್ಷಿಸುತ್ತಿದ್ದ ರವಿದಾಸನು ಇದ್ದರೆ ಇಂತಹ ಯೋಗವಿರಬೇಕು,ಎಷ್ಟು ಪುಣ್ಯ ಮಾಡಿರುವನೋ,ಅದ್ಯಾವ ದೇವಪೂಜೆ ಮಾಡಿರುವನೋ ಹಾಗೂ ಅದ್ಯಾವ ಗುರುವನ್ನು ಆರಾಧಿಸಿರುವನೋ ಈ ರಾಜಕುಮಾರ ಎಂತಹ ಯೋಗವೆಂದು ಯೋಚಿಸುತ್ತಿದ್ದನು.
ರವಿದಾಸನು ಸಂಜೆ ಮಠವನ್ನು ಸ್ವಚ್ಛ ಗೊಳಿಸಿ ಶ್ರೀಪಾದಗುರುಗಳ ದರ್ಶನಕ್ಕಾಗಿ ಬಂದಾಗ ಗುರುಗಳು ರವಿದಾಸನನ್ನು ಕುರಿತು ನದಿಯ ಬಳಿ ನಿಂತು ಏನು ಯೋಚಿಸುತ್ತಿದ್ದೆ ಎಂದು ಕೇಳಿದರು,ರವಿದಾಸನು ನಿಸ್ಸಂಕೋಚವಾಗಿ ತನ್ನ ಮನದಲ್ಲಿ ಬಂದ ಎಲ್ಲ ಆಲೋಚನೆಗಳನ್ನು ಅರುಹಿದನು.
ಅದನ್ನು ಕೇಳಿದ ಗುರುಗಳು ಬಾಲ್ಯದಿಂದಲೂ ಕಷ್ಟವನ್ನೇ ಅನುಭವಿಸುತ್ತಿರುವ ನಿನಗೆ ಅವು ಸಹಜವಾದ ಆಲೋಚನೆಗಳೆ,ನಿನಗೆ ಅದೇ ರೀತಿಯಾದ ರಾಜಭೋಗವನ್ನನುಭವಿಸುವ ಯೋಗವಿದೆ,ಅದನ್ನು ಈ ಜನ್ಮದಲ್ಲೇ ಅನುಭವಿಸುವೆಯೋ ಅಥವ ಮುಂದಿನ ಜನ್ಮದಲ್ಲಿ ಅನುಭವಿಸುವೆಯೋ ಎಂದು ಕೇಳಿದರು.
ರವಿದಾಸನು ಗುರುಗಳ ಬಳಿ ತಮ್ಮ ಸತ್ಯಸಂಕಲ್ಪವಿದ್ದಂತೆ ಆಗಲಿ,ಈಗಾಗಲೆ ನಾನು ಮುಪ್ಪಿನಂಚಿನಲ್ಲಿದ್ದೇನೆ, ನಿಮ್ಮನ್ನು ಅಗಲಿರಲಾರೆ,ನಿಮ್ಮ ಚರಣಗಳಿಂದ ನನ್ನನ್ನು ದೂರಮಾಡಬೇಡಿ ಎಂದು ಕ್ಷಮೆ ಯಾಚಿಸಿದನು.
ಗುರುಗಳು ರವಿದಾಸನ ತಲೆಯಮೇಲೆ ತಮ್ಮ ವರದಹಸ್ತವನ್ನಿಟ್ಟು ಮುಂದಿನಜನ್ಮದಲ್ಲಿ ಬೀದರ್ ನಗರದ ಮ್ಲೇಂಚ ಅರಸನಾಗಿ ಹುಟ್ಟಿ ರಾಜ್ಯಭೋಗವನ್ನನುಭವಿಸು ಹಾಗೂ ಅಂತ್ಯಕಾಲದಲ್ಲಿ ನಿನಗೆ ನಮ್ಮ ದರ್ಶನವಾಗುವುದು ಆಗ ನಾವು ನರಸಿಂಹಸರಸ್ವತಿ ಎಂಬ ಅಭಿದಾನದಿಂದ ಬೀದರ್ ಬಳಿಯ ಗಾಣಗಾಪುರದಲ್ಲಿರುವೆವು ಎಂದು ಆಶೀರ್ವದಿಸಿದರು.
ಅಂತೆಯೇ ರವಿದಾಸನು ಮುಂದಿನಜನ್ಮದಲ್ಲಿ ಬೀದರ್ ನಗರದ ಮ್ಲೇಂಚ ಅರಸನಾಗಿ ಹುಟ್ಟಿ ರಾಜ್ಯಭೋಗವನ್ನನುಭವಿಸಿ ಅಂತ್ಯಕಾಲದಲ್ಲಿ ನರಸಿಂಹಸರಸ್ವತಿಮಹಾರಾಜರ ದರ್ಶನ ಸೇವೆಗೈಯ್ದು ಮುಕ್ತಿಪಡೆದನು.

 

🙏ಜೈ ಗುರುದೇವ ದತ್ತ 🙏
– ರಾಮಚಂದ್ರ,ಬಾಳಗಂಚಿ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!