Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಶೃಂಗಗಿರಿಯ ಜೀವನ್ಮುಕ್ತ ಜಗದ್ಗುರುಗಳು -3. Jeevanmukta Jagadguru of Sringeri 3

Published

on

ಗುರು‌‌‌ ಮಹಿಮೆ 6

ಒಮ್ಮೆ ಶಿವಮೊಗ್ಗೆಯಿಂದ ಹಲವಾರು ಜನ ಭಕ್ತರು ಗುರುವರ್ಯರ ದರ್ಶನಕ್ಕಾಗಿ ಶೃಂಗೇರಿಗೆ ಬಂದರು.ಎಲ್ಲರೂ ಅವರವರ ಮತಧರ್ಮಕ್ಕೆ ಅನುಗುಣವಾಗಿ ಸಂಧ್ಯಾವಂದನೆ, ಪ್ರಾರ್ಥನೆಗಳನ್ನು ನೆರವೇರಿಸಿ ಶ್ರೀ ಶಾರದಾ ಅಮ್ಮನವರ ದರ್ಶನ ಮಾಡಿದರು.ನಂತರ ನೃಸಿಂಹವನಕ್ಕೆ ತೆರಳಿ ಗುರುದೇವರ ದರ್ಶನಕ್ಕಾಗಿ ಕಾದು ಕುಳಿತರು.ಆ ಗುಂಪಿನಲ್ಲಿ ಎಸ್.ವಿ.ಕೃಷ್ಣಮೂರ್ತಿರಾಯರೂ ಒಬ್ಬರು.ಗುರುದೇವರು ಹೊರಕ್ಕೆ ಆಗಮಿಸಿ‌ ಎಲ್ಲರ ಭಕ್ತಿ ಶ್ರದ್ಧೆಯನ್ನು ಹಸನ್ಮುಖದಿಂದ ಸ್ವೀಕರಿಸಿದರು.

ತೀರ್ಥ ವಿನಿಯೋಗ ಮಾಡುತ್ತಿದ್ದ‌ ಗುರುಗಳು ಪ್ರತಿಯೊಬ್ಬರ ಯೋಗ ಕ್ಷೇಮ ವಿಚಾರಿಸಿ,ಒಂದೆರಡು ಮಾತುಗಳಲ್ಲಿಯೇ ಅನುಗ್ರಹಿಸುತ್ತಿದ್ದರು.ಕೃಷ್ಣಮೂರ್ತಿರಾಯರ ಸರದಿ ಬಂದಾಗ,ರಾಯರು ತಲೆಬಾಗಿ ನಮಸ್ಕರಿಸಿ,ಕೈ ಚಾಚಿದರು.ಗುರುದೇವರು ತಲೆಯೆತ್ತಿ ಅವರ ಮುಖವನ್ನೊಮ್ಮೆ ನೋಡಿ,ಮೆಲ್ಲನೆ “ತಾವೇನು ಸ್ಮಾರ್ತ‌ ಸಂಪ್ರದಾಯಕ್ಕೆ ಸೇರಿದವರೋ?” ಎಂದರು.
ರಾಯರ ಮೈ ಬೆವರಿ,ಮುಖದಲ್ಲಿ ತಪ್ಪು ಮಾಡಿದ ಭಾವ ವ್ಯಕ್ತವಾಯಿತು.ಅವರು ಸಾವರಿಸಿ ಕೊಂಡು “ಅಲ್ಲ,ನಾನು ಸ್ಮಾರ್ತ ಸಂಪ್ರದಾಯಕ್ಕೆ ಸೇರಿದವನಲ್ಲ” ಎಂದರು.ರಾಯರು ಮಾಧ್ವ ಸಂಪ್ರದಾಯಕ್ಕೆ ಸೇರಿದವರಾಗಿದ್ದು ಆ ದಿನ ಸ್ಮಾರ್ತ ಮಿತ್ರರ ಜೊತೆಯಲ್ಲಿ ಸೇರಿ ತಾವೂ ಭಸ್ಮಧಾರಣೆ ಮಾಡಿಕೊಂಡುಬಿಟ್ಟಿದ್ದರು!ಗುರುದೇವರು “ನೀವು ಭಸ್ಮ ಧರಿಸಿ ಬಂದರೆ ನನಗೆ ಹತ್ತಿರವಾಗುವುದಿಲ್ಲ.ಮುದ್ರೆ ಧಾರಣೆ ಮಾಡಿಕೊಂಡು ಬಂದರೆ ನನಗೆ ದೂರವಾಗುವುದಿಲ್ಲ.ನಿಮ್ಮ ಸಂಪ್ರದಾಯ ಪಾಲಿಸಬೇಕಾದುದು ಧರ್ಮ.ಅದೇ ನಿಮಗೆ ಶ್ರೇಯಸ್ಕರ. ಇತರರನ್ನು ಮೆಚ್ಚಿಸುವುದಕ್ಕಾಗಿ ನೀವು ಭಸ್ಮಧಾರಣೆ ಮಾಡಿಕೊಳ್ಳ ಬಾರದು.ನಿಮ್ಮ ಮತ ಧರ್ಮದಂತೆ ನೆಡೆಯಿರಿ” ಎಂದು ಮೃದುವಾಗಿ ನುಡಿದರು.ರಾಯರು ಈ ವಿಷಯದಿಂದ ತುಂಬಾ ಪ್ರಭಾವಿತರಾದರು.ಶ್ರೀ ಗುರುದೇವರ ಉಪದೇಶವನ್ನು ಆಗಾಗ ಸ್ಮರಿಸಿಕೊಳ್ಳುತ್ತಿದ್ದರು.ರಾಯರು ಮುಂದೆ ರಾಜ್ಯಸಭೆಯ ಉಪಸಭಾಪತಿಗಳಾದರು.

ಶ್ರೀ ಗುರುದೇವರ ಸಮದೃಷ್ಠಿ ಪರಮತಗಳಲ್ಲಿರುವ ಗೌರವ ಭಾವನೆ, ತಪ್ಪು ಮಾಡಿದವರನ್ನು ತಿದ್ದಿ ಸನ್ಮಾರ್ಗ ತೋರಿಸುವ‌ ರೀತಿ ಇವುಗಳಿಂದ ಬಹುಜನ ಪ್ರಭಾವಿತರಾಗಿದ್ದರು.

ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳ ಚರಿತ್ರೆಯಿಂದ ಆಯ್ದ ಭಾಗದಿಂದ ಶ್ರೀಗುರುಚರಣದ ಸ್ಮರಣೆಗೈಯುತ್ತಾ..

English Version

Guru Mahime 6

Once a group of devotees had come to Sringeri for Gurudevata darshana.
They all performed their Nityakarmas, rituals according to their lineage & had darshan of Sri Amba.
Then everyone went to Narasimhavana & waited for Jagadguru’s darshan.
A gentleman S V Krishnamoorthy Rao was also among them.
The Jagadguru came out & started enquiring about each one, while giving Teertha.
Sri Krishnamoorthy Rao then came in front of Jagadguru & stretched his hands for Teertha.
The Jagadguru saw his face & asked ‘Do you belong to Smartha Sampradaya…?’
The person started sweating & answered, ‘he doesn’t belong to Smartha Sampradaya’.
He belonged to Madhwa Sampradaya, had come with Smartha friends, he thought it would be appropriate to apply Bhasma & go for Jagadguru’s darshan.

Gurudeva said…
‘I will not be pleased, only with the one who smears Bhasma or reject, one who wears mudrae….!
For me, all are one & the same.
It is your primary duty to follow your Sampradaya, which bestows you good.
You should not apply Bhasma to please someone… Follow your Dharma.

Sri Rao who later on became vice-chairman of the Rajyasabha, was very impressed by the Jagadguru’s advise & always remembered it.

Jagadguru’s compassionate sight towards all the individuals without any discrimination, impacted on lives of many people.

Remembering the Divine life history of Jagadguru Sri Chandrasekhara Bharathi Mahaswamigalu.

श्री भवानी समेतं भजे मलहानिकरेश्वरम्।

 

4 ಅಭಿಪ್ರಾಯಗಳು

4. ಅಭಿಪ್ರಾಯಗಳು

 1. B.S Vinayaka Prasad

  May 31, 2017 at 4:04 pm

  Jagadguru galige naama sastnga namaskara . This is really eye opener. Have 100 % faith in Guru.

  • admin

   May 31, 2017 at 5:07 pm

   Ty for ur support

 2. H.S.Subbaramaiah

  June 1, 2017 at 6:25 am

  My memories of Sri Sringeri Jagathguru Sri Chandrashekaraya Bharathi Swamiji. I was just a boy aged 6 years. We were residing in Hari Hara devasthanada Beedhi, just opposit Kallu devasthana. As a boy I used to go over to nearby Sharadha ammanavara temple and used play over all around the temple. One such day I kept my ears to the pipe fixed to the temple to drain out the water out of the temple behind the temple and listening to musical sound coming out of that pipe as Vedha manthra’s were being chanted by a group of Vatus inside the temple. At that time Swamiji who was going towards the Baniyan tree by the side of Thunga river stopped over observing me and asked Paricharakas to bring me to him. When I was taken me to him he asked me what I was doing keeping my ear to the pipe. I told him after salutation to him that I was listening to the sound coming out of temple. Swamiji asked my name. I told him my name is Subbaramu. Swamiji gave a a big smile and said to me ” you are not Subbaramu, you are Anantharamu and blessed me.

  • admin

   August 6, 2017 at 5:00 am

   U r a great sir

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!