Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಇತರೆ / Others

ಮಂಗಳೂರಿನ ಅನಂತಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ವಿಸ್ಮಯ

Published

on

 

ಮಂಗಳೂರು ಹೊರವಲಯದ ನೀರುಮಾರ್ಗದಲ್ಲಿರುವ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಚ್ಚರಿಯೊಂದು ನಡೆದಿದೆ.

ಸುಬ್ರಹ್ಮಣ್ಯ ದೇಗುಲದಲ್ಲಿ ನಿನ್ನೆ ದೇವರಿಗೆ ಸಮರ್ಪಿತವಾಗಿರುವ ಧ್ವಜಸ್ತಂಭಕ್ಕೆ ತೈಲಾಧಿವಾಸ ಪೂಜೆ ಅದ್ದೂರಿಯಾಗಿ ನಡೆಯುವಾಗ, ದೇಗುಲದ ಒಳಗಿನಿಂದ ಸುಬ್ರಹ್ಮಣ್ಯನ ವಾಹನವಾದ ಮಯೂರ (ನವಿಲು) ಪ್ರತ್ಯಕ್ಷವಾಗಿ ಝೇಂಕರಿಸುವ (ಕೂಗುವ) ಶಬ್ದ ಮಾಡಿತು.

ನವಿಲು ದೇಗುಲದ ಒಳಭಾಗದ ಅಂಗಣದಲ್ಲಿ ಪ್ರದಕ್ಷಿಣೆ

ಹಾಕುತ್ತಿರುವುದು.

ದೇವರ ಪೂಜೆ ಸಂದರ್ಭದಲ್ಲಿ ನವಿಲು ದೇಗುಲದ ಒಳಭಾಗದ ಅಂಗಣದಲ್ಲಿ ಪ್ರದಕ್ಷಿಣೆ ಹಾಕಿದ್ದಲ್ಲದೆ, ಜನರ ಜೊತೆಯೆ ನವಿಲು ಕೂಡ ನಡೆದುಬಂದಿದ್ದು ಅಚ್ಚರಿಗೆ ಕಾರಣವಾಗಿತ್ತು. ಅಲ್ಲದೆ, ಸುಬ್ರಹ್ಮಣ್ಯನಿಗೆ ಗರ್ಭಗುಡಿಯಲ್ಲಿ ಪೂಜೆ ನಡೆಯುತ್ತಿದ್ದಾಗ ಮುಂಭಾಗದ ತೀರ್ಥಮಂಟಪದಲ್ಲಿ ನವಿಲು ನಿಂತು ಮಂಗಳಾರತಿಯನ್ನು ವೀಕ್ಷಿಸಿತು. ಇದನ್ನೆಲ್ಲಾ ಕಂಡ ಭಕ್ತರು ಸ್ವತಃ ದೇವರೇ ಬಂದಿರುವ ರೀತಿ ಕೈಮುಗಿದು ಭಕ್ತಿ ತೋರಿದರು.

ಗರ್ಭಗುಡಿಯಲ್ಲಿ ಪೂಜೆ ನಡೆಯುತ್ತಿದ್ದಾಗ ಮುಂಭಾಗದ ತೀರ್ಥಮಂಟಪದಲ್ಲಿ ನವಿಲು

ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಸುಬ್ರಹ್ಮಣ್ಯನ ವಾಹನವೇ ಬಂದು ನಿಂತಿದ್ದು ಭಕ್ತರಿಗೆ ಪಾಲಿಗೆ ವಿಶೇಷವೇ ಸರಿ.

 

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!