ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಾಲಿಗ್ರಾಮ ಗುರು ನರಸಿಂಹ ಸನ್ನಿಧಿಯಲ್ಲಿ ಪರ್ಜನ್ಯ ಹೋಮ ಸಂಪನ್ನ.

ನೀರಿಲ್ಲದೇ ಬರಗಾಲದಿಂದ ತತ್ತರಿಸಿರುವ ಕಾರಣ ಉತ್ತಮ ಮಳೆಗಾಗಿ ಪ್ರಾರ್ಥಿಸಿ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಳದಲ್ಲಿ ಇದೇ ಜೂನ್ 2ರಿಂದ ಋತ್ವಿಜರು ಪರ್ಜನ್ಯ ಜಪವನ್ನು ಶ್ರೀದೇವಳದ ಶಂಖತೀರ್ಥ ಸರೋವರದಲ್ಲಿ ಮಾಡುತ್ತಿದ್ದು ಇಂದು ಪರ್ಜನ್ಯ ಹೋಮವನ್ನು ಮಾಡುವದರೊಂದಿಗೆ ಸಂಪನ್ನಗೊಳಿಸಲಾಯಿತು.

ವೇ.ಮೂ.ನರಸಿಂಹ ಭಟ್, ವೇಮೂ.ವೆಂಕಟರಮಣ ನಾವಡ, ವೇ.ಮೂ. ಚಿದಾನಂದ ಐತಾಳ ಮತ್ತು ಸಹಪುರೋಹಿತರ ಪೌರಹಿತ್ಯದೊಂದಿಗೆ, ಬ್ರಾಹ್ಮಣ ಮಹಾಸಭಾ (ರಿ) ಸಾಲಿಗ್ರಾಮ ವಲಯ, ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಕೇಂದ್ರ ಸಂಸ್ಥೆ ಮತ್ತು ಸಾಲಿಗ್ರಾಮ ಅಂಗಸಂಸ್ಥೆಯವರ ಸಹಕಾರದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಳಿಸಲಾಯಿತು.

ಇದರೊಂದಿಗೆ ಋತ್ವಿಜರಿಂದ ಪರ್ಜನ್ಯ ಜಪ ಹಾಗೂ ಕೋಟ 14ಗ್ರಾಮದ ವಿಪ್ರ ಮಹಿಳೆಯರಿಂದ ವಿಷ್ಣು ಸಹಸ್ರನಾಮ ಪಠಣ ಜರುಗಿತು.

ಲೋಕಕಲ್ಯಾಣಾರ್ಥವಾಗಿ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಭಾವನೆಯನ್ನು ಸ್ವೀಕರಿಸದೆ ಸೇವಾರೂಪದಲ್ಲಿ ಯಶಸ್ವಿಯಾಗಿ ನೇರವೇರಿಸಿಕೊಟ್ಟ ಎಲ್ಲಾ ಋತ್ವಿಜರಿಗೆ, ಯಶಸ್ಸಿಗಾಗಿ ಸಹಕರಿಸಿದ ಬ್ರಾಹ್ಮಣ ಮಹಾ ಸಭಾ (ರಿ), ಕೂಟಮಹಾಜಗತ್ತು ಸಾಲಿಗ್ರಾಮ (ರಿ), ಮತ್ತು ವಿಪ್ರ ಮಹಿಳಾ ಬಳಗದವರಿಗೆ ಶ್ರೀದೇವಳದ ಆಡಳಿತ ಮಂಡಳಿಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸಲಾಯಿತು.
ವರಪ್ರಸದ ಅನುಗ್ರಹಿಸಿದ ನೃಸಿಂಹ
ಎರಡನೆಯ ತಾರಿಖಿನಿಂದ ಆರಂಭವಾದ ಕಾರ್ಯಕ್ರಮದಲ್ಲಿ ಮರುದಿನ ಅಂದರೆ ಮೂರನೆಯ ತಾರೀಖು ಮಳೆ ಬಂದು ಭೂವಿ ತಂಪಾಗಿತು. ಇದು ಒಂದು ಪವಾಡವೇ ಸರಿ.
ಬಂದಾಯಿತು ಮಳೆ ದೇವರ ಮಹಿಮೆ
ಒಂದು ಹುಲ್ಲು ಕಡ್ಡಿ ಅಲ್ಲಾಡಬೇಕಾದರು ಭಗವಂತನ ಇಚ್ಛೆ ಬೇಕು . ಅವನಿಲ್ಲದೆ ಏನು ನಡೆಯಲಾರದು ಈ ಪೊಡವಿಯೊಳಗೆ. ಪೊಡವಿಗೊಡೆಯನದ್ದೇ ಆಜ್ಞೆ ಅದನ್ನ ಮೀರಲಾಗದು . ಶ್ರೀ ಕ್ಷೇತ್ರ ಸಾಲಿಗ್ರಾಮ ಮಹಿಮೆ
ಗಿಡಗಳನ್ನು ನೆಟ್ಟು ಬೆಳಸಿ
ಮರವನ್ನು ಉಳಿಸಿ
ಕೆರೆಯನ್ನು ಉಳಿಸಿ ಹಾಗೂ ಸ್ವಚ್ಛಗೊಳಿಸಿ
ಪರಿಸರವನ್ನು ಸಂರಕ್ಷಿಸಿ
ದಯವಿಟ್ಟು ಪ್ರತಿಯೊಬ್ಬರು ಕಾಳಜಿ ವಹಿಸಿ
ಬರಗಾಲ ಇನ್ನೆಂದು ಬಾರದಂತೆ ಜಾಗ್ರತೆ ವಹಿಸಿ
– ಶ್ರೀ ಗಣೇಶ್ ಭಟ್, ಸಾಲಿಗ್ರಾಮ