Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಇತರೆ / Others

.” ನವರಾತ್ರಿ ವಿಶೇಷ”.. ಆಚರಣೆ ಸಂಪ್ರದಾಯಿಕವಾಗಿ ಎಲ್ಲರೂ ಆಚರಿಸುವುದು ಹೇಗೆ..?

Published

on

.” ನವರಾತ್ರಿ ವಿಶೇಷ”..
ನವರಾತ್ರಿ ಸಂಪೂರ್ಣ ಮಾಹಿತಿ ..

ಶಾರದಾ ನವರಾತ್ರಿ ಅಥವಾ ಶರನ್ನವರಾತ್ರಿ:ಶರನ್ನವರಾತ್ರಿ ಅಥವಾ ಮಹಾನವರಾತ್ರಿ ಎಂತಲೂ ಕರೆಯಲ್ಪಟ್ಟಿದೆ. ದುಷ್ಟ ಶಕ್ತಿಗಳ ನಿಗ್ರಹ ಮತ್ತು ಶಿಷ್ಟರ ಪರಿಪಾಲನೆ ನಡೆದ ನೆನಪಿನಲ್ಲಿ ಈ ಆಚರಣೆ. ಪಾಂಡವರು ಬನ್ನಿ ಮರಕ್ಕೆ ಕಟ್ಟಿದ್ದ ತಮ್ಮ ಆಯುಧಗಳನ್ನು ಮರಳಿ ಪಡೆದ ಕಾಲ, ಶ್ರೀರಾಮ ರಾವಣನನ್ನು ವಧಿಸಿದ ಕಾಲ, ಕೌರವರನ್ನು ಕೊಂದು ಪಾಂಡವರು ಧರ್ಮಸಾಮ್ರಾಜ್ಯವನ್ನು ಸ್ಥಾಪಿಸಿದ ಕಾಲ ಇದಾಗಿತ್ತು ಎಂಬುದು ಪ್ರಾಗೈತಿಹಾಸದಿಂದ ತಿಳಿದುಬಂದ ವಿಷಯ. ಇಲ್ಲಿ ನವದಿನಗಳಲ್ಲಿ ಯಾವ ಯಾವ ದೇವಿಯರನ್ನು ಆರಾಧಿಸುತ್ತಾರೆ ಸ್ವಲ್ಪ ನೋಡೋಣ:

ಮೊದಲನೇ ದಿನ ದೇವಿಯನ್ನು “ಶೈಲಪುತ್ರೀ” ರೂಪದಲ್ಲಿ ಪೂಜಿಸಲಾಗುತ್ತದೆ‌‌..
ಸತೀ ದೇವಿಯ ಅವತಾರ ಕಾಲದಲ್ಲಿ ದಕ್ಷಬ್ರಹ್ಮನ ಯಾಗಾಗ್ನಿಗೆ ತನ್ನನ್ನು ಅರ್ಪಿಸಿಕೊಂಡಿದ್ದ ಆದಿಶಕ್ತಿಯು, ನಂತರದಲ್ಲಿ ಪರ್ವತರಾಜನ ಮಗಳಾಗಿ ಜನಿಸಿ “ಶೈಲಪುತ್ರೀ” ಎಂಬ ಹೆಸರಿನಿಂದ ಪ್ರಖ್ಯಾತಳಾಗುತ್ತಾಳೆ..
ಶೈಲ ಎಂದರೆ ಪರ್ವತ , ಪರ್ವತರಾಜನ ಮಗಳು ಎಂದರ್ಥ..!!
ಶೈಲಪುತ್ರೀ ದೇವಿಗೆ ಪಾರ್ವತೀ, ಹೈಮವತೀ ಎಂಬ ಇತರ ಹೆಸರುಗಳೂ ಇವೆ..
ಈಕೆಯು ಚಂದ್ರಗ್ರಹದ ಅಧಿದೇವತೆ, ಈಕೆಯನ್ನು ಪೂಜಿಸುವುದರಿಂದ ಮನಸ್ಸು ಶಾಂತವಾಗಿಯೂ, ನಿರ್ಮಲವಾಗಿಯೂ, ಇದ್ದು ಸರ್ವ ರೋಗಗಳನ್ನು ನಿವಾರಿಸುವುದು..
ಮೊದಲ ದಿನ : “ಶ್ರೀ ದುರ್ಗಾದೇವಿ” ಯನ್ನು ಶ್ರೀ ದುರ್ಗಾ ಅಷ್ಟೋತ್ತರದಿಂದ ಪೂಜಿಸುವುದು..
**

ಎರಡನೆಯ ದಿನ :: ಬ್ರಹ್ಮಚಾರಿಣೀ ದೇವಿ :: ಪರ್ವತರಾಜನ ಪುತ್ರಿಯಾಗಿ ಜನಿಸಿದ ಆದಿಶಕ್ತಿಯ ಅವಿವಾಹಿತ ಕನ್ಯೆಯ ರೂಪವನ್ನೇ ಬ್ರಹ್ಮಚಾರಿಣೀ ಎಂದು ಕರೆಯಲಾಗುತ್ತದೆ..
ಬ್ರಹ್ಮ ಎಂದರೆ ತಪಸ್ಸು, ಚಾರಿಣಿ ಎಂದರೆ ಆಚರಿಸುವವಳು.. ತಪಸ್ಸನ್ನು ಆಚರಿಸುವವಳು ಎಂದರ್ಥ..
ಈ ದೇವಿಯು ಕುಜಗ್ರಹದ ಅಧಿದೇವತೆಯಾಗಿದ್ದು , ಈಕೆಯನ್ನು ಪೂಜಿಸುವುದರಿಂದ ಮನಸ್ಸು ಸದಾಚಾರ , ಸಂಯಮದಿಂದ ಕೂಡಿದ್ದು ಎಂತಹ ಕಠಿಣ ಸಮಸ್ಯೆಗಳನ್ನು ಬೇಕಾದರೂ ನಿವಾರಣೆಯಾಗುತ್ತದೆ..
ಎರಡನೆಯ ದಿನ :: “ಶ್ರೀ ಬಾಲಾತ್ರಿಪುರಸುಂದರೀ” ಅಷ್ಟೋತ್ತರ ಓದಿ ಪೂಜಿಸುವುದು..
****

ಮೂರನೆಯ ದಿನ :: “ಚಂದ್ರಘಂಟಾ ದೇವಿ” :: ಪಾರ್ವತೀದೇವಿಯು ಪರಶಿವನನ್ನು ವರಿಸಿದ ನಂತರದ ಸ್ವರೂಪವನ್ನು “ಚಂದ್ರಘಂಟಾ” ಎನ್ನಲಾಗುತ್ತದೆ..
ವಿವಾಹವಾದ ನಂತರ ದೇವಿಯು ಘಂಟೆಯ ಆಕೃತಿಯಲ್ಲಿರುವ ಅರ್ಧ ಚಂದ್ರನನ್ನು ತನ್ನ ಮಸ್ತಕದ ಮೇಲೆ ಧರಿಸಿರುವುದರಿಂದ ಈಕೆಯನ್ನು ಚಂದ್ರಘಂಟಾ ಎಂದು ಕರೆಯಲಾಗುತ್ತದೆ..
ಈ ದೇವಿ ಶುಕ್ರಗ್ರಹದ ಅಧಿದೇವತೆಯಾಗಿದ್ದು, ಈ ದೇವಿಯ ಪೂಜೆಯಿಂದ ಸಕಲ ಕಾರ್ಯಗಳು ನಿರ್ವಿಘ್ನವಾಗಿ ನಡೆದು, ವಿಜಯವಾಗುತ್ತದೆ..
ಮೂರನೇಯ ದಿನ : ಶ್ರೀ ಗಾಯತ್ರೀ ದೇವಿ ಅಷ್ಟೋತ್ತರದಿಂದ ಪೂಜಿಸಿ..
******

ನಾಲ್ಕನೆಯ ದಿನ :: ಕೂಷ್ಮಾಂಡಾ ದೇವಿ :: ಜಗಜ್ಜನನಿ ದುರ್ಗಾದೇವಿಯ ನಾಲ್ಕನೇ ಸ್ವರೂಪವೇ ಕೂಷ್ಮಾಂಡ ಎನ್ನುವುದಾಗಿದೆ..
ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ ಎಲ್ಲೆಡೆ ಅಂಧಕಾರವೇ ತುಂಬಿತ್ತು. ಆಗ ದೇವಿಯು ತನ್ನ “ಈಶತ್” ಹಾಸ್ಯದಿಂದ ತನ್ನ ಮಧುರವಾದ ಮುಗುಳ್ನಗೆಯಿಂದ ಬ್ರಹ್ಮಾಂಡವನೇ ರಚಿಸಿದ್ದಳು..
ಈಕೆ ಸೂರ್ಯ ಗ್ರಹದ ಅಧಿದೇವತೆಯಾಗಿದ್ದಾಳೆ, ಈಕೆಯ ಪೂಜೆಯಿಂದ ಅಪಾರ ತೇಜಸ್ಸು, ಯಶಸ್ಸು ಹೊಂದಿ ಪಾಪ ಪರಿಹಾರವಾಗುತ್ತದೆ..
ನಾಲ್ಕನೆಯ ದಿನ :: “ಶ್ರೀ ಅನ್ನಪೂರ್ಣೇಶ್ವರಿ ಸ್ತೋತ್ರ” ಅಥವಾ ಅಷ್ಟೋತ್ತರಿಂದ ಪೂಜಿಸುವುದು.

***

ಐದನೇ ದಿನ :: ಸ್ಕಂದ ಮಾತಾ :: ಶ್ರೀ ಪಾರ್ವತೀ ದೇವಿಯು ಸ್ಕಂದನಿಗೆ ತಾಯಿಯಾದ ಕಾರಣಕ್ಕಾಗಿಯೇ ಸ್ಕಂದ ಮಾತಾ ಎಂಬ ಹೆಸರು ಬಂದಿದೆ..
ಸ್ಕಂದ ಎಂದರೆ ಸುಬ್ರಹ್ಮಣ್ಯ ಸ್ವಾಮಿ‌..
ಈ ದೇವಿಯು ಬುಧಗ್ರಹದ ಅಧಿದೇವತೆಯಾಗಿದ್ದು , ಈಕೆಯನ್ನು ಪೂಜಿಸುವುದರಿಂದ ಸಕಲ ವ್ಯಾಪಾರ, ವ್ಯವಹಾರಗಳು ಅಡೆತಡೆ ಇಲ್ಲದೇ ನಡೆಯುತ್ತದೆ..
ಮಕ್ಕಳ ಅಭ್ಯುದಯವಾಗುತ್ತದೆ..
ಐದನೆಯ ದಿನ : “ಶ್ರೀ ಲಲಿತಾ ಅಷ್ಟೋತ್ತರದಿಂದ” ದೇವಿಯನ್ನು ಪೂಜಿಸುವುದು ಶುಭ…!!
***

ಆರನೆಯ ದಿನ ::: ಕಾತ್ಯಾಯನೀ ದೇವಿ :: ಜಗಜ್ಜನನೀ ಪಾರ್ವತೀ ದೇವಿಯು ಮಹಿಷಾಸುರನ ಸಂಹಾರಕ್ಕಾಗಿ ಕಾತ್ಯಾಯನೀ ರೂಪವನ್ನು ಧರಿಸುತ್ತಾಳೆ..
ಮಹಿಷಾಸುರನ ಅಟ್ಟಹಾಸ ಮತ್ತು ಕಂಟಕವು ಅತಿಯಾದಾಗ ಬ್ರಹ್ಮ, ವಿಷ್ಣು, ಮಹೇಶ್ವರರು , ಮತ್ತು ದೇವತೆಗಳು ತಮ್ಮ ತಮ್ಮ ಶಕ್ತಿ ತೇಜಸ್ಸಿನ ಒಂದು ಅಂಶವನ್ನಿತ್ತು ಅಸುರನ ವಿನಾಶಕ್ಕಾಗಿ ಓರ್ವ ದೇವಿಯನ್ನು ಸೃಷ್ಟಿಸುತ್ತಾರೆ…
ಈ ದೇವಿಯನ್ನು ಕಾತ್ಯಾಯನರು ಮೊದಲು ಪೂಜಿದಕ್ಕಾಗಿಯೇ “ಕಾತ್ಯಾಯನೀ” ಎಂಬ ಹೆಸರು ಬಂದಿದೆ..
ಈ ದೇವಿಯು “ಗುರುಗ್ರಹ” ದ ಅಧಿದೇವತೆಯಾಗಿದ್ದು ಈಕೆಯು ಪೂಜೆಯಿಂದ ಧರ್ಮ, ಅರ್ಥ , ಕಾಮ, ಮೋಕ್ಷ ವೆಂಬ ನಾಲ್ಕು ಫಲಗಳೂ ಪ್ರಾಪ್ತಿಯಾಗುತ್ತದೆ..
ವಿವಾಹ ಸಮಸ್ಯೆ, ಸಂಸಾರದ ಸಮಸ್ಯೆ ಬೇಗ ನಿವಾರಣೆಯಾಗುತ್ತದೆ..
ಆರನೆಯ ದಿನ :: ಶ್ರೀ ಕಾತ್ಯಾಯನೀ ಅಷ್ಟೋತ್ತರ ಮತ್ತು ಶ್ರೀ ಅಷ್ಟಲಕ್ಷ್ಮೀ ಅಷ್ಟೋತ್ತರದಿಂದ ದೇವಿಯನ್ನು ಪೂಜಿಸಿ..
****

“ಏಳನೆಯ ದಿನ “. :: ಕಾಲರಾತ್ರೀ ದೇವಿ :: ತಾಯಿ ಪಾರ್ವತೀದೇವಿಯು ಶುಂಭ-ನಿಶುಂಭರ ಸಂಹಾರಕ್ಕಾಗಿ ತನ್ನ ಬಂಗಾರದ ಬಣ್ಣದ ರೂಪದವಿದ್ದ ದೇಹವನ್ನು ತ್ಯಜಿಸಿದಾಗ, ಆಕೆಯ ದೇಹವು ಕಪ್ಪು ಬಣ್ಣದಿಂದ ಕೂಡಿ ಭಯಂಕರವಾಗಿ ಕಾಣುತ್ತದೆ.. ನಾಲಿಗೆಯನ್ನು ಹೊರಚಾಚಿ ಘೋರ ರೂಪವಾಗಿ ಕಾಣುವ ಆ ದೇವಿಯನ್ನು ” ಕಾಲರಾತ್ರಿ” ಎಂದು ಕರೆಯಲಾಗುತ್ತದೆ..
ಈ ದೇವಿಯು “ಶನಿಗ್ರಹ” ದ ಅಧಿದೇವತೆಯಾಗಿದ್ದು, ಈ ದೇವಿಯ ಪೂಜೆಯಿಂದ ಸರ್ವ ಗ್ರಹಭಾಧೆ, ಮಾಟಮಂತ್ರ ದೋಷ ನಿವಾರಣೆಯಾಗುತ್ತದೆ..
ಶನಿದೋಷಗಳು ನಿವಾರಣೆಯಾಗುತ್ತದೆ..
ಏಳನೆಯ ದಿನ :: ಶ್ರೀ ಮಹಾಕಾಳೀ ಅಷ್ಟೋತ್ತರ ಮತ್ತು ಶ್ರೀ ಸರಸ್ವತೀ ಅಷ್ಟೋತ್ತರದಿಂದ ದೇವಿಯನ್ನು ಪೂಜಿಸಿ..!!!
****

“ಎಂಟನೆಯ ದಿನ ” :: “ಮಹಾಗೌರೀ” :: ಪಾರ್ವತೀ ದೇವಿಯು ಪರಮೇಶ್ವರನೇ ತನ್ನ ಪತಿಯಾಗಬೇಕೆಂದು ಕಠಿಣ ತಪಸ್ಸನ್ನು ಆಚರಿಸಿದಾಗ ದೇಹವು ಕಪ್ಪಾಗುತ್ತದೆ.. ಇವಳ ಕಠೋರ ತಪಸ್ಸಿಗೆ ಮೆಚ್ಚಿದ ಪರಮೇಶ್ವರನು ಪ್ರತ್ಯಕ್ಷನಾಗಿ ಕಪ್ಪನೆಯ ಶರೀರವನ್ನು ಗಂಗೆಯಿಂದ ತೊಳೆದಾಗ ಅದು ಅತ್ಯಂತ ಪ್ರಕಾಶಮಾನವಾಗಿ ಹೊಳೆಯುತ್ತದೆ, ಅಂದಿನಿಂದ ಈಕೆಯನ್ನು ಗೌರೀ ಎಂದು ಕರೆಯಲಾಗುತ್ತದೆ..
ಈ ದೇವಿಯು “ರಾಹು” ಗ್ರಹದ ಅಧಿದೇವತೆ, ಈಕೆಯ ಪೂಜೆಯಿಂದ ಪಿತೃದೋಷ ,ಶಾಪಗಳು ನಿವಾರಣೆಯಾಗಿ, ಸರ್ವಕಾರ್ಯಗಳು ಸುಲಲಿತವಾಗಿ ನಡೆದು, ಸತ್ಸಂತಾನ ಪ್ರಾಪ್ತಿಯಾಗುತ್ತದೆ..
ಎಂಟನೆಯ ದಿನ :: ಶ್ರೀ ದೇವಿ ಅಷ್ಟೋತ್ತರ ಮತ್ತು ಗೌರೀ ಅಷ್ಟೋತ್ತರದಿಂದ ದೇವಿಯನ್ನು ಪೂಜಿಸಿ..
***

ಒಂಭತ್ತನೆಯ ದಿನ :: ಸಿದ್ಧಿದಾತ್ರೀ ದೇವಿ :: ಬ್ರಹ್ಮಾಂಡವು ಸೃಷ್ಟಿಯಾಗುವುದಕ್ಕೆ ಮೊದಲು ಆದಿಪರಾಶಕ್ತಿಯು ನಿರಾಕಾರಾಳಾಗಿರುತ್ತಾಳೆ, ಆಗ ಪರಮೋಚ್ಚ ದೇವತೆಯಾದ ಆದಿಪರಾಶಕ್ತಿಯು ಪರಶಿವನ ಎಡಗೈಯಿಂದ “ಸಿದ್ಧಿಧಾತ್ರೀ” ರೂಪವನ್ನು ತಳೆಯುತ್ತಾಳೆ..
ಈ ದೇವಿಯು ಕೇತುಗ್ರಹದ ಅಧಿದೇವತೆಯಾಗಿದ್ದು, ಈಕೆಯ ಪೂಜೆಯಿಂದ ಅಣಿಮಾದಿ ಅಷ್ಠ ಸಿದ್ದಿಗಳೂ ಲಭಿಸುತ್ತವೆ. ಇಷ್ಟಾರ್ಥ ಸಿದ್ಧಿಯಾಗುತ್ತದೆ..
“ಒಂಭತ್ತನೆಯ ದಿನ” : ಶ್ರೀ ಮಹಿಷಾಸುರ ಮರ್ಧಿನಿ ಸ್ತೋತ್ರ ಮತ್ತು ಅಷ್ಟೋತ್ತರದಿಂದ ದೇವಿಯನ್ನು ಪೂಜಿಸುವುದು..

**********
“ನವರಾತ್ರಿ” ಯ ನೈವೇದ್ಯ ಗಳು..

“ದೇವಿಗೆ ಅರಿಸಿನ, ಕುಂಕುಮ, ಹೂವು, ಹಣ್ಣು, ತಾಂಬಲ, ಪ್ರತಿದಿನ ಪೂಜೆಯ ನಂತರ ಸುಮಂಗಲಿಯರಿಗೆ ಕೊಡುವುದು ಶುಭಕರವಾಗಿರುತ್ತದೆ..

” ದೇವಿ ನೈವೇದ್ಯಕ್ಕೆ ಪ್ರತಿದಿನ ” ಪಾನಕ” , ಕೋಸಂಬರಿ, ತಾಂಬೂಲ, ಹಣ್ಣು, ಇಡಲೇಬೇಕು..!

ಪಾನಕ : ನಿಂಬೆಹಣ್ಣಿನ ಪಾನಕ, ಬೇಲದ ಹಣ್ಣಿನ ಪಾನಕ, ಹಣ್ಣುಗಳ ರಸ, ಇಡಬಹುದು..

 

ಮೊದಲ ದಿನ : ಖಾರಾ ಪೊಂಗಲ್ (ಹುಗ್ಗಿನು ಮಾಡ್ತಾರೆ), ಅರಿಸಿನದ ಚಿತ್ರಾನ್ನ ಅಥವಾ ಪುಳಿಯೊಗರೆ ನೈವೇದ್ಯ ಮಾಡಬಹದು..
(ಒನ್ನೊಂದು ಪುಸ್ತಕದಲ್ಲಿ ಒನ್ನೊಂದು ತರಹ ಇದೆ, ಸಾಧ್ಯಾವಗುವುದನ್ನು ಮಾಡಿ)

ಎರಡನೆಯ ದಿನ : “ಚಿತ್ರಾನ್ನ ಅಥವಾ ಪುಳಿಯೊಗರೆ, ನಿಂಬೆಹಣ್ಣಿನ ಚಿತ್ರಾನ್ನ ತುಂಬಾ ಒಳ್ಳೆಯದು..!!
ಮೊಸರನ್ನ ತುಂಬಾ ವಿಶೇಷ.., ಸಕ್ಕರೆಯಿಂದ ಮಾಡಿದ ಸಿಹಿ ವಿಶೇಷ ಫಲ ಕೊಡುವುದು..

ಮೂರನೆಯ ದಿನ : ಕೊಬ್ಬರಿಯ ಪಾಯಸ, ಅಥವಾ ಕೊಬ್ಬರಿಯ ಅನ್ನ, ಸಿಹಿ ಪೊಂಗಲ್ , ನೈವೇದ್ಯ ಮಾಡಬಹದು..!!

ನಾಲ್ಕನೆಯ ದಿನ : ” ತುಪ್ಪದ ಅನ್ನ, ಮೊಸರನ್ನ, ಬೆಲ್ಲದನ್ನ, ನೈವೇದ್ಯ ಮಾಡಬಹದು.. ಉದ್ದಿನಿಂದ ಮಾಡಿದ ಸಿಹಿ ಪದಾರ್ಥಗಳು , ರಂದ್ರ ಮಾಡದ ಉದ್ದಿನ ವಡೆ ಕೆಲವು ಕಡೆ ನೈವೇದ್ಯ ಮಾಡುವರು..!!

ಐದನೆಯ ದಿನ : ಹಣ್ಣುಗಳು ಹಾಕಿದ ಮೊಸರನ್ನ(ದಾಳಿಂಬೆ, ದ್ರಾಕ್ಷಿ, ಕರ್ಜೂರ), ಕಡಲೇಬೇಳೆ ಹೂರಣ, ಸಿಹಿ ಪಾಯಸ ನೈವೇದ್ಯ ಮಾಡಬಹುದು..!!

ಆರನೇ ದಿನ :: ಕೇಸರೀಬಾತ್ ಅಥವಾ ಬೆಲ್ಲದ ರವೆ ಸಜ್ಜಿಗೆ, ಹುಗ್ಗಿ, ಬೆಲ್ಲದ ಪಾಯಸ ನೈವೇದ್ಯ ಮಾಡಬಹುದು..

ಏಳನೆಯ ದಿನ :: ಬೆಲ್ಲದ ದೋಸೆ, ಕೋಸಂಬರಿ, ಹೆಸರುಬೇಳೆ ಪೊಂಗಲ್, ಅನ್ನ ಮತ್ತು ತರಕಾರಿ ಹುಳಿ, ಎರಿಯಪ್ಪ ಮಾಡಬಹುದು..

ಎಂಟನೆಯ ದಿವಸ :: ಸಕ್ಕರೆ ಪೊಂಗಲ್, ಬೆಲ್ಲದ ಪಾಯಸ, ಬೆಲ್ಲದನ್ನ, ಆಂಬೊಡೆ, ಹೋಳಿಗೆಯೂ ಮಾಡಬಹುದು..

ಒಂಭತ್ತನೆಯ ದಿವಸ :: ಹಾಲು ಅನ್ನ, ಪಾಯಸ ಅಥವಾ ಹಲ್ವಾ, ಶಾಲ್ಯಾಹ್ನ , ಸಿಹಿ ಭಕ್ಷ್ಯ ಮಾಡಬಹುದು..

ಹತ್ತನೆಯ ದಿವಸ :: ಒಬ್ಬಟ್ಟು, ಲಾಡು, ಪುಳಿಯೊಗರೆ, ಸಿಹಿ ಪೋಂಗಲ್ ..ಇತ್ಯಾದಿ ಮಾಡಬಹುದು..!!

“ನವರಾತ್ರಿಯ ಪ್ರತಿದಿನವೂ ವಿಶೇಷ ಪೂಜೆ, ನೈವೇದ್ಯ ಮಾಡಬಹುದು..
ಪಾನಕ, ಕೋಸಂಬರಿ, ಪಾಯಸ, ಮೊಸರನ್ನ, ಹಾಲುಅನ್ನ, ಚಿತ್ರಾನ್ನ , ಪ್ರತಿದಿನವೂ ಮಾಡಿದರೆ ಶುಭ..

****

ನವರಾತ್ರಿಯಲ್ಲಿ ಒಂಭತ್ತು ದಿನವೂ ಸುಮಂಗಲಿಯರಿಗೆ ತಾಂಬೂಲದಾನ ಶುಭವಾಗಿರುತ್ತದೆ..,

ಸುಮಂಗಲಿಯರಿಗೆ :: ಅರಿಸಿನ, ಕುಂಕುಮ, ಹೂವು, ಹಣ್ಣು, ತಾಂಬೂಲ, ದಕ್ಷಿಣೆ , ವಸ್ತ್ರ, ಬಳೆ, .. ಇತ್ಯಾದಿ ಕೊಡುವುದು ಶುಭ.

” ಮೊರದ ಬಾಗಿನವನ್ನೂ ಸಹ ಕೊಡುವುದು ಅತ್ಯಂತ ಶುಭವಾಗಿರುತ್ತದೆ..
ಮೊರದ ಬಾಗಿನವನ್ನು ಕೊಡುವುದರಿಂದ
*ಕುಜದೋಷ ನಿವಾರಣೆಯಾಗುತ್ತದೆ..
*ಸತೀಪತೀ ಕಲಹ ನಿವಾರಣೆಯಾಗುತ್ತದೆ..
* ಲಕ್ಷ್ಮೀನಾರಾಯಣ ರ ಪೂರ್ಣ ಅನುಗ್ರಹವಾಗುತ್ತದೆ..
*ದಾಂಪತ್ಯದ ಸಮಸ್ಯೆ ಗಳು ನಿವಾರಣೆಯಾಗುತ್ತದೆ..
***

ದೇವಿ ಪೂಜೆ ಗೆ : ಜಾಜಿ ಹೂವು, ಮಲ್ಲಿಗೆ ಹೂವು, ಗುಲಾಬಿ ಹೂವು, ಬಿಲ್ವಪತ್ರೆ, ಪಾರಿಜಾತ ಪುಷ್ಪ, ಕಮಲದ ಹೂವು, ಕೆಂಪು ಕಣಗಲೇ ಹೂವು, ರುದ್ರಾಕ್ಷಿ ಹೂವು, .. ತುಂಬಾ ಫಲದಾಯಕವಾಗಿರುತ್ತದೆ..

ನೈವೇದ್ಯ ಕ್ಕೆ ಹಣ್ಣುಗಳು :: ಸೀಬೆಹಣ್ಣು, ಸೇಬು, ಕಿತ್ತಳೆ ಹಣ್ಣು, ಮಾವಿನ ಹಣ್ಣು, ನೇರಳೇ ಹಣ್ಣು, ಅಂಜೂರ, ಬೇಲದ ಹಣ್ಣು, ದ್ರಾಕ್ಷಿ, ಬಾಳೆಹಣ್ಣು, ಪೂರ್ಣಫಲ…

***

” ನವರಾತ್ರಿಯ” ಸಮಯದಲ್ಲಿ ಪ್ರತಿದಿನವೂ ಸಂಜೆ “ನೆಲ್ಲಿಕಾಯಿ” ದೀಪ ಹಚ್ಚುವುದು ಹೆಚ್ಚು ವಿಶೇಷವಾಗಿರುತ್ತದೆ..
(ನೈವೇದ್ಯ ಮತ್ತು ದೀಪದ ಮಹತ್ವಕ್ಕಾಗಿ “ದೇವರ ದೀಪಗಳು ಮತ್ತು ದೇವರ ಪ್ರಸಾದಗಳು ಪುಸ್ತಕವನ್ನು ಓದಿ)
ನೆಲ್ಲಿಕಾಯಿ ದೀಪವನ್ನು ಹಚ್ವುವುದರಿಂದ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ..
ಸಮಸ್ತ ಸಾಲದಭಾದೆ ನಿವಾರಣೆಯಾಗುತ್ತದೆ..

ಮುಂದುವರಿಯುತ್ತದೆ..

ಸಂಗ್ರಹ

@ಗಿರೀಶ್ ಶರ್ಮ ತುಮಕೂರು @
girish1989sharma@gmail.com
WhatsApp : 9008026083

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!