Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಕಡಲೆ ಗಣಪತಿ Kadale Ganapathi

Published

on

ಕನ್ನಡ1 of 2
To Change Language, Click ← → (arrow) Button

ಶೃಂಗೇರಿ ಎಂದೊಡನೆ ಸ್ಮೃತಿ ಪಟಲದಲ್ಲಿ ಹೆಚ್ಚಾಗಿ ಮೂಡುವುದೇ ಈ ವಿದ್ಯಾಶಂಕರ ದೇವಾಲಯ.ಶಿಲ್ಪ ಕಲಾವೈಭವದ ಈ ಆಲಯದ ಹೊರಾಂಗಣದ ಗೋಡೆಯಲ್ಲಿ ಸುತ್ತಲೂ ಸಪ್ತಲೋಕಗಳಂತೆ ಏಳು ಮಜಲು ಗಳಿವೆ.ಪ್ರತಿಯೊಂದರಲ್ಲೂ ವೈಶಿಷ್ಟ್ಯಪೂರ್ಣ ಕೆತ್ತನೆಗಳು ಕಂಡು ಬರುತ್ತದೆ.ಅದರಲ್ಲಿ ಮೊದಲನೆಯದು ಕುದುರೆಗಳ ಸಾಲು. ಎರಡನೇಯ ಮಜಲಿನಲ್ಲಿ ಗಜಗಳ ಸಾಲು.ಇಲ್ಲಿ ವಿವಿಧ ಭಂಗಿಗಳಲ್ಲಿ ಆನೆಗಳನ್ನು ನಾವು ಕಾಣುತ್ತೇವೆ.

ಶ್ರೀ ವಿದ್ಯಾಶಂಕರ ದೇವಸ್ಥಾನದ ಎಡ ಪಾರ್ಶ್ವದ ಈ ಎರಡನೇಯ ಮಜಲಿನಲ್ಲಿ ಗಣಪತಿಯ ಪುಟ್ಟ ಕೆತ್ತನೆಯಿದೆ. ಈ ಗಣಪತಿಯು ಚತುರ್ಭಜನಾಗಿ ಪಾಶಾಂಕುಶ ಧರನಾಗಿ,ಮೊದಕವನ್ನು ಸವಿಯುತ್ತಾ,ತನ್ನನ್ನು ವಂದಿಸುವವರಿಗೆ ಅಭಯಪ್ರದನಾಗಿ ಇಲಿಯನೇರಿ ವಿರಾಜನಾಗಿದ್ದಾನೆ.

ಇವನಿಗೆ “ಬೆನಬೆನಕ ಏಕದಂತ,ಪಚ್ಚೆಕಲ್ಲು ಪಾಣಿಪೀಠ,ಮುತ್ತಿನುಂಡೆ ಹೊನ್ನಗಂಟೆ ಇಂತಿ ಒಪ್ಪುವ ಶ್ರೀ ಸಿದ್ಧಿವಿನಾಯಕ ದೇವರಿಗೆ ಇಪ್ಪತ್ತೊಂದು ನಮಸ್ಕಾರಗಳು” ಎಂಬ ಜನಪ್ರೀಯ ಶ್ಲೋಕದೊಂದಿಗೆ ಚಿನ್ನರು ದೂರ್ವೇ,ಕಡಲೆ ಸಮರ್ಪಿಸಿ ಪ್ರಾರ್ಥನೆ ಮಾಡುವುದು ಪ್ರತೀತಿ.ಹಾಗಾಗಿಯೇ ಇವನನ್ನು ಕಡಲೆ ಗಣಪ,ಮಕ್ಕಳ ಗಣಪ ಎನ್ನುವುದು.

ಶೃಂಗೇರಿಯಲ್ಲಿ ಬಾಲ್ಯ ಜೀವನ ಕಳೆದವರು ಇಂತನೊಂದಿಗೆ ಭಾವನಾತ್ಮಕ ಸಂಬಂದ ಹೊಂದಿರುವುದು ವಿಶೇಷ.

ಗಣೇಶ ಚತುರ್ಥಿಯ ಸಂದರ್ಭದಲ್ಲಿ ಶೃಂಗೇರಿಯ ಅಪರೂಪದ ಈ ಗಣೇಶನ ಪ್ರಾರ್ಥನೆಯೊಂದಿಗೆ.

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!