Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಕಾರುಣ್ಯ ನಿಧೇ 3 Karunya Nidhe 3

Published

on

ಶಿಷ್ಯ ವಾತ್ಸಲ್ಯ
Shishyas Vatsalya

ಗುರು ಮಹಿಮೆ 22

ಶೃಂಗೇರಿಯ ಮಲ್ಲಿಕಾರ್ಜುನಬೀದಿ ನಿವಾಸಿಗಳಾದ ಶ್ರೀ ಸುಂದರ ಘನಪಾಠಿಗಳು ಶ್ರೀ ಜಗದ್ಗುರು ಮಹಾಸ್ವಾಮಿಗಳ ಸೇವೆಯಲ್ಲಿಯೇ ಸದಾ ಇದ್ದವರು.ಇವರ ಗುರುಭಕ್ತಿ ಇತರರಿಗೂ ಅನುಕರಣೀಯವಾದದು.ಇಂದಿಗೂ ಇವರ ಕುಟುಂಬ ವರ್ಗ ಶೃಂಗೇರಿಯ ಮಲ್ಲಿಕಾರ್ಜುನಬೀದಿಯಲ್ಲಿಯೇ ವಾಸವಾಗಿದೆ.

ಒಮ್ಮೆ ಘನಪಾಠಿಗಳು ಮಠದ ಕಾರ್ಯ ನಿಮಿತ್ತ ತಿರುಚಿರಾಪಳ್ಳಿಗೆ ಹೋಗಿದ್ದರು.ಬಂದ ಕಾರ್ಯ ಮುಗಿದ ಮೇಲೆ ಶೃಂಗೇರಿಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದರು. ಟಿಕೆಟ್ ತೆಗೆದುಕೊಳ್ಳಲು ಹೊದಾಗ ಅವರಿಗೆ ಒಂದು ವಿಚಿತ್ರವಾದ ಅನುಭವವಾಯಿತು.”ಘನಪಾಠಿ ಹೊರಡಬೇಡ” ಎಂದು ಯಾರೋ ಹೇಳಿದಂತಾಯಿತು.ತಮಿಳುನಾಡಿನಲ್ಲಿ ಕನ್ನಡ ಧ್ವನಿ? ಎಂದು ಆಶ್ಚರ್ಯದಿಂದ ಹಿಂತಿರುಗಿ ನೋಡಿದಾಗ ಪರಿಚಿತರು ಯಾರು ಕಾಣುತ್ತಿಲ್ಲ,”ಏನೋ ಭ್ರಮೆ ” ಎಂದು ಕೊಂಡರು.ಟಿಕೆಟ್ಟನ್ನು ಕೊಂಡು ಬಸ್ಸಿನ ಸಮೀಪಕ್ಕೆ ಬಂದರು. ಇನ್ನೇನು ಬಸ್ಸನ್ನು ಹತ್ತ ಬೇಕು,ಮತ್ತೆ ಅದೇ ಪರಿಚಿತವೆನಿಸುವ ಧ್ವನಿಯಲ್ಲಿ “ಬೇಡ ಘನಪಾಠಿ ಹೊರಡಬೇಡ” ಎಂಬ ಆದೇಶವಾಣಿ.ಆಗ ಮತ್ತಷ್ಟು ಆಶ್ಚರ್ಯದಿಂದ ಸುತ್ತಲೂ ನೋಡಿದರು. ಗುರುತಿನವರು ಯಾರು ಕಾಣುತ್ತಿಲ್ಲ. ಬಸ್ಸನ್ನು ಹತ್ತಿ ಕುಳಿತರು.ಪುನಃ ಅದೇ ಮಾತುಗಳು ಕೇಳಿಬಂದವು “ಯಾರಿಗೋ ಹೇಳೋದು?ಇಳಿ ಕೆಳಕ್ಕೆ! ಈಗ ಹೊರಡಬೇಡ” ಎಂಬ ಆಜ್ಞಾವಾಣಿ,ಉಗ್ರಧ್ವನಿಯಲ್ಲಿ.ಇದನ್ನು ಕೇಳಿದ ಘನಪಾಠಿಗಳ ಮೈ ಭಯದಿಂದ ಬೆವರಿತು.ಅವರಿಗೆ ಅತ್ಯಂತ ವಿಸ್ಮಯವಾಯಿತು‌.ಈಗ ಕೇಳಿದ ಧ್ವನಿ ಜಗದ್ಗುರು ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳದ್ದೆ ಆಗಿದೆ.

ಘನಪಾಠಿಗಳು ತಕ್ಷಣ ಗುರುವಾಜ್ಞೆಯೆಂದು ಬಸ್ಸಿನಿಂದ ಇಳಿದರು.ಈ ಅನುಭವ ಮನಸ್ಸಿನಲ್ಲಿ ಮೇಲುಕು ಹಾಕುತ್ತಾ ಅಲ್ಲಿಯೇ ಅಡ್ಡಾಡಿದರು.ಅರ್ಧ ಗಂಟೆಯಲ್ಲಿ ಇನ್ನೊಂದು ಬಸ್ಸು ಹೊರಡಲಿತ್ತು‌.ಅದರಲ್ಲಿ ಕುಳಿತರು.ಈಗ ಯಾವ ವಾಣಿಯು ಕೇಳಿ ಬರಲಿಲ್ಲ. ಹೀಗೇಕಾಯಿತೆಂದು ಮನಸ್ಸಿನಲ್ಲಿ ಆಲೋಚಿಸುತ್ತಿದ್ದರು.ಆ ಬಸ್ಸು ಹಲವಾರು ಮೈಲಿಗಳು ಕ್ರಮಿಸಿದ‌ ನಂತರ ಇದ್ದಕ್ಕಿದ್ದಂತೆಯೇ ನಿಂತಿತು.ಮೊದಲು ಹೊರಟಿದ್ದ ಬಸ್ಸು ಅಪಘಾತಕ್ಕೆ ಈಡಾಗಿದ್ದುದು ಕಂಡುಬಂತು.ಪ್ರಯಾಣಿಕರೆಲ್ಲರೂ ಕಂಗಾಲಾಗಿದ್ದರು.ಘನಪಾಠಿಗಳಿಗೆ ಹೇಳಲಾಗದಷ್ಟು ಆಶ್ಚರ್ಯವಾಯಿತು.ಶಿಷ್ಯರ ಯೋಗಕ್ಷೇಮದಲ್ಲಿ ಗುರುಗಳಿಗಿರುವ ನಿರತಿಶಯವಾದ ವಾತ್ಸಲ್ಯವನ್ನು ನೆನೆದು ಬಾಷ್ಪಲೋಚನರಾಗಿ,ಶ್ರೀ ಶ್ರೀಗಳವರನ್ನು ಮನಸಾ ಸಾಷ್ಟಾಂಗ ಪೂರ್ವಕವಾಗಿ ವಂದಿಸಿದರು.

ಇಂದಿನಿಂದ ಪ್ರತಿ ಸೋಮವಾರ ಜಗದ್ಗುರು ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ ದಿವ್ಯಚರಿತ್ರೆಯ ಆಯ್ದ ಅನುಗ್ರಹ ಪ್ರಸಂಗಗಳು ಜ್ಞಾನದ ಇ-ಪತ್ರಿಕೆಯ ಗುರುಮಹಿಮೆ ಅಂಕಣದಲ್ಲಿ ಮೂಡಿಬರಲಿದೆ.

English version

Guru Mahime 22

Śrī Sundara Ghanapāthi residing in the Mallikārjuna street of Śṛngerī was an ardent devotee and shishya of Jagadguru Śrī Abhinava Vidyātīrtha Mahāswāmīji. His devotion and service towards the Jagadguru was exemplary.Even today, his family lives on the Mallikārjuna street in Śṛngerī.

Once, math’s official work had brought Śrī Ghanapāthi to the city of Trichy. After completing the work he had intended to, he left for the bus station to return to Śṛngerī. While he was going to purchase the bus ticket, Śrī Ghanapāthi experienced a strange feeling. It sounded as if someone was calling out to him saying, “do not leave, Ghanapāthi”. “A kannada voice in Tamil Nadu?”, he wondered and turned around trying to spot the speaker. Having failed to spot any recognisable person in the crowd, he passed it down thinking it was a delusion. When he almost stepped into the bus that was supposed to take him to Śṛngerī, he heard that faintly recognisable voice again, ordering him not to leave. Śrī Ghanapāthi thinking it was just his mind, paid no attention and took a seat. Immediately there was the voice again, more fierce, “can’t you hear me? Get off the bus. Do not leave now”. Stunned by the strange voice again, Śrī Ghanapāthi’s face started showing perspiration. He was completely startled. He immediately realised that it was the voice of his guru, Śrī Abhinava Vidyātīrtha Mahāswāmīji.

Śrī Ghanapāthi immediately stepped off the bus, keeping to his Guru’s instructions. He stood there, trying to come to senses after what happened. Another bus was scheduled to leave after a half hour. He boarded it without any interruptions. Wondering why it happened, he sat back in his seat. After the bus had progressed several miles towards its destination, it suddenly came to a halt in the centre of the road. The bus that Śrī Ghanapāthi was meaning to board had met with an accident and hence the vehicles had stopped. Sri Ghanapāthi was taken aback with wonderment. The affection the Jagadguru had towards his shishyas and their well-being brought tears to his eyes and he offered Sāshtānga Pranāmās to their lotus feet in his mind.

Starting from today, events in the holy life of Śrī Abhinava Vidyātīrtha Mahāswāmīji will be posted under the ‘Guru mahimā’ column of our e-magazine, Jnānadā.

4 ಅಭಿಪ್ರಾಯಗಳು

4. ಅಭಿಪ್ರಾಯಗಳು

 1. Venkatasubramanian/kannan

  July 17, 2017 at 2:19 am

  Very good work done by your team…. excellent Seva

 2. N L KRISHNAMURTHY

  July 17, 2017 at 5:02 am

  I am to know that u r publishing jnanad magazine. good luck can i get a copy of the mag regularly i am N L KRISHNAMURTHY son of late sri N LAKSHMINARAYANA SASTRY who was the PRIVATE SECRETARY to sri sri abhinava vidyatheertha mahaswamigalu during 1955 thro 1976 if u come across any of his photos can u pl mail me thanks

 3. Nagesh Ramdas

  July 17, 2017 at 3:13 pm

  Sashtanga Namaskara gallu to the Great guru _/|\_

 4. K Manik Prabhu

  July 21, 2017 at 4:15 pm

  I have no words to express. I am spell bound. Really the team is blessed one. The bliss one enjoy out of reading about shrunegeri & guru parampara is just to be experienced.Thanks n regads to team

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!