Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಶೃಂಗಗಿರಿಯ ಜೀವನ್ಮುಕ್ತ ಜಗದ್ಗುರುಗಳು 8. Jeevanmukta Jagadguru of Sringeri 8

Published

on

ಗುರು ಮಹಿಮೆ 33

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿದ್ದ ಪ್ರೊ.ಸುಬ್ಬರಾಮಯ್ಯನವರು ಬ್ರಹ್ಮಚಾರಿಗಳಾಗಿ ಆಧ್ಯಾತ್ಮಿಕ ಸಾಧನಾನಿತರಾಗಿದ್ದರು.ಸಾಧನಾ ಪಥದಲ್ಲಿ ತೊಡಕುಗಳು ಉಂಟಾದಾಗ ಶೃಂಗೇರಿ ಜಗದ್ಗುರುಗಳಲ್ಲಿ ನಿವೇದಿಸಿ ಸೂಕ್ತ ಮಾರ್ಗದರ್ಶನ ಪಡೆಯುತ್ತಿದ್ದರು.

ಹೀಗೆ ಒಮ್ಮೆ ಶೃಂಗೇರಿಗೆ ಬಂದ ಅವರು ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳ ಬಳಿ “ಮಹಾಸ್ವಾಮಿ ನಾನು ಜಪಕ್ಕೆ ಕುಳಿತಾಗ,ನಾನಾ ಆಲೋಚನಾ ತರಂಗಗಳೆದ್ದು ಮನಸ್ಸಿನ ಏಕಾಗ್ರತೆಗೆ ಅಡ್ಡಿಪಡಿಸುತ್ತಿವೆ.ಇದನ್ನು ನಿವಾರಿಸುವುದು ಹೇಗೆಂದು ತಿಳಿಯುತ್ತಿಲ್ಲ” ಎಂದು ಬಿನ್ನಮಿಸಿಕೊಂಡರು.

ಆಗ ಗುರುಗಳು “ನೀವು ಕಾಲೇಜಿಗೆ ಬೈಸಿಕಲ್ಲಿನಲ್ಲಿ ಹೋಗುವಾಗ ಎದರು ದಿಕ್ಕಿನಿಂದಲೂ,ಅಕ್ಕಪಕ್ಕದ ಅಡ್ಡ ರಸ್ತೆಗಳಿಂದಲೂ,ನಿಮ್ಮ ಹಿಂಬದಿಯಿಂದಲೂ ವಾಹನಗಳು ಬರುತ್ತಲೇ ಇರುತ್ತದೆ. ಇವೆಲ್ಲವನ್ನೂ ಗಮನಿಸುತ್ತಾ ನೀವು ಎಚ್ಚರವಾಗಿ ಬೈಸಿಕಲ್ಲಿನ ಪೆಡಲನ್ನು ಕಾಲಿನಿಂದ ಒತ್ತುತ್ತಲೇ ಇರುತ್ತೀರಿ.ಎದರು,ಹಿಂದೆ,ಅಕ್ಕಪಕ್ಕದಲ್ಲಿ ಅಡ್ಡಿಯಿದೆ ಎಂದು ನೀವು ಪೆಡಲನ್ನು ತುಳಿಯುವುದನ್ನು ನಿಲ್ಲಿಸಿಬಿಡುವುದಿಲ್ಲವಲ್ಲವೇ?ಈ ಎಲ್ಲಾ ಅಡ್ಡಿ ಆತಂಕಗಳನ್ನು ನಿವಾರಿಸಕೊಂಡು ಮುಂದಕ್ಕೆ ಚಲಿಸುತ್ತ ಕಾಲೇಜನ್ನು ಸೇರುತ್ತಿರಿ.ಹಾಗೆಯೇ ಜಪ ಸಾಧನೆಗೆ ಅಡ್ಡಿ ಆಂತಕಗಳು ಬಂದರೂ,ನಿಮ್ಮ ಪ್ರಯತ್ನವನ್ನು ಧೃತಿಗೆಡದೆ ಮುಂದುವರಿಸುತ್ತಿರಿ ಯಶಸ್ಸು ದೊರಕುತ್ತದೆ ” ಎಂದು ಅಭಯವಿತ್ತರು.

ಸುಬ್ಬರಾಮಯ್ಯನವರು ” ನಾನು ಕಾಲೇಜಿನಲ್ಲಿ ಮಾಡುವ ಅಧ್ಯಾಪನ ವೃತ್ತಿ, ಆಧ್ಯಾತ್ಮಿಕ ಸಾಧನೆಗೆ ತೊಡಕಾಗುತ್ತದೆಯೋ ಎಂಬ ಆತಂಕ ಆಗಾಗ ಉಂಟಾಗುತ್ತದೆ” ಎಂದರು.ಗುರುಗಳು “ನೀವು ವಿದ್ಯಾರ್ಥಿಗಳಿಗೆ ಕಲಿಸುವುದು ಸರಸ್ವತೀಯ ಸೇವೆಯೇ ತಾನೇ?ಅದೂ ಕೂಡ ಶ್ರೀ ಶಾರದೆಯ ಉಪಾಸನೆಯೇ ಆಗುತ್ತದೆ. ಅದರಲ್ಲಿ ಯಾವ ಆತಂಕವೂ ಬೇಡ”ಎಂದು ಸ್ಪಷ್ಟಗೊಳಿಸಿದರು.ಜಗದ್ಗುರು ಮಹಾಸ್ವಾಮಿಗಳಿಗೆ ಸುಬ್ಬರಾಮಯ್ಯನವರು ಸಾಷ್ಟಾಂಗವೆರಗಿದರು. ಪ್ರೊ.ಸುಬ್ಬರಾಮಯ್ಯನವರು ಹಲವಾರು ಬಾರಿ ಪ್ರತ್ಯಕ್ಷ ಮತ್ತು ಕೆಲವು ಬಾರಿ ಪರೋಕ್ಷ ಮಾರ್ಗದರ್ಶನವನ್ನು ಜಗದ್ಗುರು ಚಂದ್ರಶೇಖರಭಾರತೀ ಮಹಾಸ್ವಾಮಿಗಳಿಂದ ಪಡೆದ ಭಾಗ್ಯಶಾಲಿಗಳಾಗಿದ್ದಾರೆ.

ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳ ಚರಿತ್ರೆಯಿಂದಾಯ್ದ ಭಾಗಯಿದಾಗಿದೆ.

ಜ್ಞಾನದ e magazine ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರುವ ವೈಶಿಷ್ಟ್ಯಪೂರ್ಣ ಮಾಹಿತಿಗಳನ್ನು ಪಡೆಯಲು www.jnanada.in ಅಥವಾ ನಮ್ಮ ಫೇಸ್ ಬುಕ್ ಪೇಜ್ ಜ್ಞಾನದ ಕ್ಕೆ ಭೇಟಿ ಕೊಡಿ…

English version

Guru Mahime 33

Śrī Subbarāmayya was a physics professor in the Central college in Bengaluru. He was a staunch celibate (Brahmacāri) and spent his time performing various spiritual practices. Everytime he faced any problems or obstacles throughout their spiritual journey, he would seek the guidance of the Śṛngerī Jagadguru and he would receive suitable support.
Once he came to Śṛngerī and had Darshan of Jagadguru Śrī Candraśekhara Bhāratī Mahāswāmīji. Śrī Subbarāmayya said, “Mahāswāmīji, whenever I sit for Japa, numerous distractions destroy my concentration. Please guide me to go about this situation.” and so he described his agony.
Then the Jagadguru Mahāswāmīji says, “when you commute to college everyday, there will be vehicles all around you coming from every direction. You notice all of these vehicles but you still continue to peddle forward. Just because there are vehicles coming in from different directions, you will not stop cycling forward, will you? You overcome the traffic and successfully maneuver your bike and safely reach college. Similarly, whatever hurdles or disturbances may come your way during your spiritual practices, you shouldn’t give heed but just continue your efforts and attain your goal.” and so the Jagadguru Mahāswāmīji blessed the devotee.
The professor also asked the Jagadguru, “Mahāswāmīji, I am anxious whether my occupation as a teacher is being a hurdle for my spiritual practices and accomplishments.” for which the Jagadguru replies, ”as a teacher teaching the students, it is only nothing but the sevā of mother Saraswatī, isn’t it? It is just another form of worshipping mother Śāradāmba.” and so, the Jagadguru Mahāswāmīji cleared the devotees mind of questions and blessed him. Śrī Subbarāmayya having been immensely satisfied with the answers, performed Sāṣtānga praṇāmās to the Jagadguru Mahāswāmīji.
An excerpt from the divine life of Jagadguru Śrī Candraśekhara Bhāratī Mahāswāmīji.

To avail the various articles in both Kannada and english languages on our e-magazine Jnānadā, visit our website www.Jnanada.in or check out our facebook page ‘Jnānadā’ for more information.

5 ಅಭಿಪ್ರಾಯಗಳು

5. ಅಭಿಪ್ರಾಯಗಳು

 1. M.Nagarathna

  August 4, 2017 at 12:56 pm

  Hari om very useful information .thank u

  • admin

   August 5, 2017 at 1:55 am

   Ty

 2. Srivatsa

  August 4, 2017 at 9:32 pm

  This post made my day..!! Thanks a lot for posting. I wish you guys to keep writing.

  • admin

   August 5, 2017 at 1:54 am

   Ty

 3. Krishnamoorthy S

  August 7, 2017 at 10:05 am

  Thanks for the illuminating post. My shastanga pranaams to the Jagatguru swamigal.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!