Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಅವಧೂತ ಮಹಿಮೆ / Avadhūta Mahime

ಅವದೂತ ಮಹಿಮೆ 4 Avadootha Mahime 4

Published

on

ಕನ್ನಡ1 of 2
To Change Language, Click ← → (arrow) Button

ಅವದೂತ ಮಹಿಮೆ 4

ಶೃಂಗೇರಿಯ JCBM ಕಾಲೇಜಿನಲ್ಲಿ ಓದುತ್ತಿದ್ದ ಆಗುಂಬೆಯ ಯೋಗಿಶ್ ಗೆ ಕಲಾವಿದನಾ‌ಗಬೇಕೆಂಬ ಆಸೆ ಮನದಲ್ಲಿ ಮೂಡಿತು.ಹಾಗಾಗಿ B.com ಪದವಿ ಮುಗಿಸಿದೊಡನೆ ಸಾಗರದ ನೀನಾಸಂಗೆ ಸೇರಿದರು.ಅಲ್ಲಿ ನಾಲ್ಕು ವರ್ಷ ಕಲಿಕೆ ಸಾಗಿತು.ನಂತರ ರಾಜ್ಯದ ಹಲವೆಡೆ ಮಕ್ಕಳಿಗೆ ನಾಟಕಾದಿ ಕಲೆಗಳ ಪರಿಚಯ ಮತ್ತು ತರಬೇತಿ ನೀಡುವ ಕಲಾ ಶಾರದೆಯ ಉಪಾಸನೆಯೊಂದಿಗೆ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು.ತನ್ನ ಕನಸಿನಂತೆ ಬದುಕು ಸಾಗಿತ್ತು,ಅದರೊಂದಿಗೇ ತೃಪ್ತಿ ಮತ್ತು ಆನಂದಗಳು ಜೊತೆಗಿದ್ದಿದ್ದರಿಂದ ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ಎಂಬ ಸ್ಥಿತಿ ನಿರ್ಮಾಣವಾಗಿತ್ತು.ಹೀಗಿರುವಾಗ ಒಂದು ದಿನ ಬೆನ್ನು ನೋವು ಕಾಣಿಸಿಕೊಂಡಿತು.ವೈದ್ಯಕೀಯೋಪಚಾರವಾಯಿತು.ಒಂದೆರಡು ದಿನಗಳಲ್ಲಿ ಗುಣವಾಯಿತೆನ್ನುವಾಗ ಮತ್ತೆ ಬೆನ್ನು ನೋವು ಕಾಣಿಸಿತು.ಮತ್ತೆ‌ ವೈದ್ಯರ ಬಳಿ ಹೋಗಿ ಬಂದ ಮೇಲೆ ಸ್ವಲ್ಪ ಸಮಾದಾನವಾಯಿತು.ಬೆನ್ನು ನೋವು ಮತ್ತೆ ಮತ್ತೆ ಕಾಣಿಸತೊಡಗಿತು.ನಂತರ ರಾಜ್ಯದ ಹಲವಾರು ಪ್ರತಿಷ್ಟಿತ ಆಸ್ಪತ್ರೆಗಳ ಸುತ್ತಾಟ ಪ್ರಯೋಜನಕ್ಕೆ ಬಾರದಾದಾಗ ಬರಸಿಡಿಲು ಬಡಿದಂತಾಯಿತು.

ಜೀವನೋತ್ಸಾಹವೆಲ್ಲ ಕಳೆದುಕೊಂಡಿದ್ದ ಯೋಗಿಶರಿಗೆ ಅವದೂತ ಶ್ರೀ ಬಿಂದುಮಾಧವ ಶರ್ಮರ ಭಕ್ತರೊಬ್ಬರು ಬೆಲಗೂರಿನ ದಾರಿ ತೋರಿಸಿದರು.ಯೋಗಿಶ್ ಗೆ ಇಲ್ಲಿ ಶ್ರೀ ವೀರ ಪ್ರತಾಪ ಆಂಜನೇಯನಿಗೆ ಹಲವಾರು ಸೇವೆಗಳನ್ನು ಸಲ್ಲಿಸಲು ಅವದೂತ ಸ್ವಾಮಿಗಳು ಸೂಚಿಸಿದರು. ಅದರಂತೆ ನೆಡದ ಯೋಗೀಶರಿಗೆ ಬೆನ್ನು ನೋವು ಸಂಪೂರ್ಣವಾಗಿ ಶಮನಗೊಂಡು,ಮೊದಲಿನ ಉತ್ಸಾಹ ಮರಳಿಬಂತು.ನಂತರ ಇಲ್ಲಿಂದ ಹೊರಡಲು ಸನ್ನದ್ಧರಾಗಿ ತನ್ನ ರಕ್ಷಕರಾದ ಬೆಲಗೂರಿನ ಗುರುಗಳ ಆಶಿರ್ವಾದ ಪಡೆಯಲು ಅವರ ಬಳಿ ಬಂದರು.ಆಗ ಅವದೂತ ಶ್ರೀ ಬಿಂದು ಮಾಧವ ಶರ್ಮರು ಯೋಗಿಶರಿಗೆ ಇಲ್ಲಿಯೇ ಇರುವಂತೆ ಸೂಚಿಸಿ ಬೆಲಗೂರಿಗೆ ಬರುವ ಭಕ್ತ ಜನರಿಗೆ ನಿತ್ಯ ನೆಡೆಯುವ ಅನ್ನಸಂತರ್ಪಣೆಯ ಮೇಲ್ವಿಚಾರಣೆಯ ಜವಾಬ್ದಾರಿ ನೀಡಿ ಅನುಗ್ರಹಿಸಿದರು.ತನಗೆ ಮರು ಜೀವನ ನೀಡಿದ ಅವದೂತರ ಮತ್ತು ವೀರಪ್ರತಾಪ ಆಂಜನೇಯಸ್ವಾಮಿಯನ್ನು ಅನು ಕ್ಷಣವೂ ಸ್ಮರಿಸುತ್ತಾ ಬೆಲಗೂರಿನಲ್ಲಿ ಯೋಗಿಶ್ ರವರು
ಮಡದಿ ಮತ್ತು ಮಗನೊಂದಿಗೆ ಸುಖಿ‌ ಜೀವನವನ್ನು ನೆಡೆಸುತ್ತಿದ್ದಾರೆ.

ಜ್ಞಾನದ e magazine ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರುವ ವೈಶಿಷ್ಟ್ಯಪೂರ್ಣ ಮಾಹಿತಿಗಳನ್ನು ಪಡೆಯಲು www.jnanada.in ಅಥವಾ ನಮ್ಮ ಫೇಸ್ ಬುಕ್ ಪೇಜ್ ಜ್ಞಾನದ ಕ್ಕೆ ಭೇಟಿ ಕೊಡಿ..

ಕನ್ನಡ1 of 2
To Change Language, Click ← → (arrow) Button

2 ಅಭಿಪ್ರಾಯಗಳು

2. ಅಭಿಪ್ರಾಯಗಳು

  1. Domnic Dsouza

    August 10, 2017 at 6:09 am

    Can you mention d location n name no of of this Shree Avadhoota?

    • jnanada

      August 14, 2017 at 11:14 am

      Panchanahalli Rd, Belaguru, Karnataka 577597

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!